September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಅನುಗ್ರಹದಲ್ಲಿ ನವೀಕೃತಗೊಂಡ ಪೂರ್ವ ಪ್ರಾಥಮಿಕ ತರಗತಿ ಹಾಗೂ ಒಳಾಂಗಣ ಆಟದ ಮನೆಯ ಉದ್ಘಾಟನೆ

ಉಜಿರೆ : ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಮಾ.20ರಂದು ಸುಸಜ್ಜಿತವಾದ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ನವೀಕೃತ ಕಟ್ಟಡ ಮತ್ತು ಆಟದ ಮನೆಯ ಉದ್ಘಾಟನಾ ಕಾರ‍್ಯಕ್ರಮ ನಡೆಯಿತು.

ಸಿಸ್ಟರ್ ಸರಿತಾ ಹಾಗೂ ಸಹಶಿಕ್ಷಕಿ ಫಿಲೋಮಿನಾ ಇವರ ಪ್ರಾರ್ಥನಾ ವಿಧಿಯೊಂದಿಗೆ ಆರಂಭವಾದ ಕಾರ‍್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂದನೀಯ ಫಾ! ಅಬೆಲ್ ಲೋಬೊ ಅವರು ರಿಬ್ಬನ್ ಕತ್ತರಿಸುವ ಮೂಲಕ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ನವೀಕೃತ ಕೊಠಡಿಗೆ ಆಶೀರ್ವಚನಗೈದು ಶುಭ ಹಾರೈಸಿದರು.

ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ! ವಿಜಯ್ ಲೋಬೊ ಅವರು ತಮ್ಮ ಸಂದೇಶದಲ್ಲಿ ನವೀಕರಣದ ಮಹತ್ವವನ್ನು ವಿವರಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆಯ ಪ್ರಯತ್ನಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು.
ಕಾರ‍್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿವಾಸ್, ಆರ್ಥಿಕ ಸಮಿತಿಯ ಸದಸ್ಯ ಪ್ರವೀಣ್ ವಿಜಯ್ ಡಿಸೋಜ ಹಾಗೂ ಕಾಂಟ್ರಾಕ್ಟರ್ ಅನಿಲ್ ಡಿಸೋಜ ರವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಶಾಲೆಯ ಸಿಬ್ಬಂದಿ ವರ್ಗದವರು, ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಹ ಶಿಕ್ಷಕ ರವಿಕುಮಾರ್ ಕಾರ‍್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Related posts

ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಯೂತ್ ತರಬೇತಿ ಕಾರ್ಯಕ್ರಮ

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೂತುವಾರು ಮತದಾನದ ವಿವರ

Suddi Udaya

ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬೈಕ್ ವಿರುದ್ಧ ಪ್ರಕರಣ ದಾಖಲು

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷರಾಗಿ ವಾಲ್ಟರ್ ಸಿಕ್ವೇರಾ ಆಯ್ಕೆ

Suddi Udaya
error: Content is protected !!