24.3 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

ಬೆಳ್ತಂಗಡಿ: ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯೊಬ್ಬರು ಚಾಟಿಂಗ್ ಮೂಲಕ ವಿಶ್ವಾಸ ಗಳಿಸಿ, ಯುವಕನೋರ್ವನಿಂದ ರೂ.6.96 ಲಕ್ಷ ಪಡೆದು ವಂಚಿಸಿದ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ ಪ್ರಕರಣ ವರದಿಯಾಗಿದೆ.


ಬರಾಯ ಕನ್ಯಾಡಿ ಗ್ರಾಮದ ಗುರಿಪಳ್ಳ ಎನೀರುಪಲ್ಕೆ ನಿವಾಸಿ, ಸತೀಶ್ ಗೌಡ ಎಂಬವರು ವಂಚನೆಗೆ ಒಳಗಾದ ಯುವಕರಾಗಿದ್ದಾರೆ. ಸತೀಶ್ ಗೌಡ ಅವರು ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಫೇಸ್‌ಬುಕ್ ಮೂಲಕ ಮಹಿಳೆಯೋರ್ವರ ಪರಿಚಯವಾಗಿತ್ತು. ಈ ಮಹಿಳೆ ಚಾಟಿಂಗ್ ಮೂಲಕ ಸತೀಶ್ ಗೌಡರವರ ವಿಶ್ವಾಸವನ್ನು ಗಳಿಸಿ, ವಿವಿಧ ಕಾರಣಗಳನ್ನು ನೀಡಿ, ಬೇರೆ, ಬೇರೆ ಖಾತೆಗಳಿಗೆ ಒಟ್ಟು ರೂ.6,96,500 ಹಣವನ್ನು ಪಡೆದು ವಂಚಿಸಿರುವುದಾಗಿ ಸತೀಶ್ ಗೌಡ ಅವರು ನೀಡಿದ ದೂರಿನಂತೆ ದ.ಕ.ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ.33/2023 ಕಲಂ : 66(ಅ) 66 (ಆ)ಯಂತೆ ಪ್ರಕರಣ ದಾಖಲಾಗಿದೆ.

Related posts

ಕೊಕ್ಕಡ ಗ್ರಾ.ಪಂ. ನ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಹಾಗೂ ವೇಣೂರಿನಲ್ಲಿ 10ಎಂ.ವಿ.ಎ ಸಾಮರ್ಥ್ಯದ ವಿದ್ಯುತ್ ಸ್ಥಾವರಗಳ ಸ್ಥಾಪಿಸುವಂತೆ ಸಚಿವರಿಗೆ ಮನವಿ

Suddi Udaya

ನಡ: ಭಾರಿ ಮಳೆಗೆ ಮನೆಯ ಗೋಡೆ ಕುಸಿತ, ಜನಸ್ನೇಹಿ ಸಂಘದ ಸದಸ್ಯರಿಂದ ಶ್ರಮದಾನ

Suddi Udaya

ಕೊಕ್ಕಡ ಸಂತ ಜೋನರ ಹಿ.ಪ್ರಾ.ಶಾಲೆ ಕೌಕ್ರಾಡಿ ಶಾಲಾ ಪ್ರಾರಂಭೋತ್ಸವ

Suddi Udaya

ಕಿಲ್ಲೂರು ಎನ್ನೆಸ್ಸೆಸ್ ಶಿಬಿರದ ಸ್ಥಳೀಯ ಸಮಿತಿ ರಚನೆ

Suddi Udaya

ರೇಂಜರ್ಸ್ ವಿಭಾಗದ ಜಾನಪದ ಗೀತ ಗಾಯನ ಸ್ಪರ್ಧೆ: ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya
error: Content is protected !!