ಬೆಳ್ತಂಗಡಿ: ಕೆ.ಎನ್. ಭಟ್ ಶಿರಾಡಿಪಾಲ್ ಅವರ ಕನ್ಮ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಶತನಮನ ಶತಸನ್ಮಾನ ಸರಣಿ ಕಾರ್ಯಕ್ರಮದ 46ನೇ ಸನ್ಮಾನವನ್ನು ವಿಶ್ರಾಂತ ದ್ವಿಭಾಷಾ ಶಿಕ್ಷಕ, ಮುಂಡಾಜೆ ಪ.ಪೂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ವೀರೇಶ್ವರ ವಿ. ಫಡ್ಕೆ ಹಾಗೂ 47ನೇ ಸನ್ಮಾನವನ್ನು ಬೆಳ್ತಂಗಡಿ ಮಹಿಳಾ ವೃಂದದ ಸಕ್ರಿಯ ಕಾರ್ಯಕರ್ತೆ ಬಹುರೂಪಿ ಪ್ರತಿಭೆ ಸಂಧ್ಯಾ ಎಸ್. ಪಾಳಂದೆ ಅವರಿಗೆ ಶಿರಾಡಿಪಾಲರ ಹುಟ್ಟೂರು ಮುಂಡಾಜೆಯಲ್ಲಿ ನೀಡಿ ಗೌರವಿಸಲಾಯಿತು.
ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ಆಡಳಿತಕ್ಕೊಳಪಟ್ಟ ಮುಂಡಾಜೆ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿನಯಚಂದ್ರ, ಶತನಮನ ಶತಸನ್ಮಾನ ಕಾರ್ಯಕ್ರಮದ ಗೌರವ ಸಲಹೆಗಾರ ಕೆ. ಶ್ರೀಪತಿ ಭಟ್, ಶಿರಾಡಿಪಾಲರ ಮಕ್ಕಳಾದ ಅನುಪಮಾ ಚಿಪ್ಳೂಣಕರ್, ಶಶಿಧರ ಪರಾಂಜಪೆ, ವಿದ್ಯಾ ಡೋಂಗ್ರೆ, ಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ ಟಿ. ಸನ್ಮಾನಿತರನ್ನು ಗೌರವಿಸಿದರು.
ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.