July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಜೊಜಿಲಾ ದಿನಾಚರಣೆ : ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗಿ

ಬೆಳ್ತಂಗಡಿ: ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಅಕ್ಟೋಬರ್ 31ಮತ್ತು ನವಂಬರ್ 1ರಂದು ನಡೆದ
ಜೊಜಿಲಾ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಯಾಗಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗವಹಿಸಿದ್ದರು.

ಭಾರತದ ಸೇನಾಪಡೆಯ11ನೇ ತೋಪುಖಾನಾ (ಆರ್ಟಿಲ್ಲರಿ) ಸೇನಾಪಡೆಯು ಜೊಜಿಲಾ ಬೆಟ್ಟಪ್ರದೇಶಗಳಲ್ಲಿ ಅತಿಕ್ರಮವಾಗಿ ಒಳನುಸುಳಿ ಕುಳಿತ್ತಿದ್ದ ಪಾಕಿಸ್ತಾನದ ಸೇನೆಯನ್ನು ಹೊರಹಾಕಿ ಆಯಕಟ್ಟಿನ ಈ ಪ್ರದೇಶವನ್ನು ಭಾರತದ ಸ್ವಾಧೀನ ಪಡಿಸಿಕೊಂಡ ಸೇನಾ ಕಾರ್ಯಾಚರಣೆಯ ಘಟಕಗಳನ್ನು ಜೊಜಿಲಾ ರೆಜಿಮೆಂಟ್ ಎಂಬ ಬಿರುದಿನೊಂದಿಗೆ ಭಾರತ ಸರಕಾರದಿಂದ ಗುರುತಿಸಲ್ಪಟ್ಟ ದಿನವನ್ನು ಜೊಜಿಲಾ ದಿನವನ್ನಾಗಿ ಆಚರಿಸಲ್ಪಡುತ್ತದೆ.

ಈ ಕಾರ್ಯಾಚರಣೆಯಲ್ಲಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಅವರು ಸೇವೆಸಲ್ಲಿಸಿದ ರೆಜಿಮೆಂಟ್ ಬಹಳ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅದರ ಸ್ಮರಣಾರ್ಥ ಕಾರ್ಯಾಚರಣೆ ಯಲ್ಲಿ ದೇಶಕ್ಕಾಗಿ ಅಮರರಾದವರನ್ನು ನೆನಪಿಸುತ್ತ ಅವರೆಲ್ಲರಿಗೆ ಶ್ರಧ್ಜಾಂಜಲಿ ಸಲ್ಲಿಸಿ ಆಚರಿಸುವ ದಿನವನ್ನು ಈ ವರ್ಷ ಕೇರಳದಕಲ್ಲಿಕೊಟೆ(ಕೋಝಿಕೋಡ್) ನಲ್ಲಿ ಆಚರಿಸಲಾಯಿತು.

Related posts

ಸರಕಾರಿ ಪ್ರೌಢಶಾಲೆ ಪೆರ್ಲ-ಬೈಪಾಡಿಯಲ್ಲಿ ಸ್ವಾಸ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಮುಂಡಾಜೆ ಸೀಟು ಬಳಿ ಕಾರು ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ

Suddi Udaya

ಬೆಳ್ತಂಗಡಿ ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜ ಪ್ರಮಾಣ: ನಾನು ಯಾರಿಂದಲೂ ಹಣವನ್ನು ಪಡೆದಿಲ್ಲ, ಭ್ರಷ್ಟಾಚಾರ ನಡೆಸಿಲ್ಲ: ದೀಪ ಬೆಳಗಿಸಿ, ಮಾರಿಗುಡಿ ಎದುರು ತೆಂಗಿನ ಕಾಯಿ ಒಡೆದು ಪ್ರಮಾಣ

Suddi Udaya

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ

Suddi Udaya

ಬದ್ಯಾರುನಲ್ಲಿ ಕಾರುಗಳ ನಡುವೆ ಅಪಘಾತ

Suddi Udaya

ಮೂಡುಕೋಡಿ ಮಂಜೂರುಗೊಂಡಿರುವ ಬಿ.ಎಸ್.ಎನ್.ಎಲ್ ಟವರ್ ಗೆ ಜಾಗ ಗುರುತಿಸುವ ಕಾರ್ಯ

Suddi Udaya
error: Content is protected !!