ಬಳಂಜ: ಕಳೆದ ಕೆಲ ಸಮಯಗಳಿಂದ ನಾಲ್ಕೂರು ಗ್ರಾಮದ ಬೊಳ್ಳಾಜೆ,ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆಯ ಹೆಜ್ಜೆಗುರುತು ಕಾಣಸಿಕ್ಕಿದ್ದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಚಿರತೆಯ ಸೆರೆಗಾಗಿ ಬೋನ್ ಅಳವಡಿಸಲಾಗಿದೆ.

ಕೆಲವು ಸಮಯದಿಂದ ಬಳಂಜದಲ್ಲಿ ಚಿರತೆ ಕಾಣ ಸಿಕ್ಕಿದ್ದು ಚಿರತೆಯ ಸೆರೆಗಾಗಿ ಹಲವಾರು ಬಾರಿ ಬೋನ್ ಅಳವಡಿಸಲಾಗಿತ್ತು. ಆದರೆ ಬೋನ್ ಗೆ ಚಿರತೆ ಬೀಳಲಿಲ್ಲ.ಇತ್ತಿಚೆಗೆ ನಾಲ್ಕೂರು ಗ್ರಾಮದ ಬೊಳ್ಳಾಜೆ ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಓಡಾಟ ಮಾಡಿದ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.
ಅದಕ್ಕನುಗುಣವಾಗಿ ತಿಂಗಳ ಹಿಂದೆ ಈ ಭಾಗದಲ್ಲಿ ಹಲವಾರು ನಾಯಿಗಳು ಕಾಣೆಯಾಗಿದ್ದವು, ಈ ಬಗ್ಗೆ ಅಳದಂಗಡಿ ಉಪ ವಲಯಾರಣ್ಯಧಿಕಾರಿ ಸುರೇಶ್ ಗೌಡರವರಿಗೆ ಮಾಹಿತಿ ನೀಡಿದಾಗ ತಕ್ಷಣ ಸ್ಪಂದಿಸಿ ಪುಣ್ಕೆದೊಟ್ಟು ಪರಿಸರದಲ್ಲಿ ಬೋನ್ ಅಳವಡಿಸಿದ್ದಾರೆ.