27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಬೊಳ್ಮನಾರು ಜನನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

ಧರ್ಮಸ್ಥಳ ಬೊಳ್ಮನಾರು ಜನನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಬೊಳ್ಮನಾರು ಗ್ರಾಮಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಎಸ್ ಡಿಎಂ ಕಾಲೇಜಿನ ಎಮ್.ಎಸ್.ಡಬ್ಲ್ಯು ವಿಭಾಗದ ಸಹಾಯಕ ಪ್ರಾದ್ಯಾಪಕಿಯಾದ ಶ್ರೀಮತಿ ಸ್ವಾತಿ ರವರು ನೆರವೇರಿಸಿ ಪ್ರತಿಯೊಬ್ಬ ಮಹಿಳೆ ತನ್ನ ಬಗ್ಗೆ ಯೋಚನೆ ಮಾಡದೇ ತನ್ನ ಗಂಡ ಮಕ್ಕಳು ಕುಟುಂಬದ ಒಳಿತಿನ ಬಗ್ಗೆ ಯೋಚನೆ ಮಾಡ್ತಾಳೆ ಅವಳಿಗೂ ಮಾನಸಿಕ ನೆಮ್ಮದಿ ಬೇಕು.ಅವಳ ಆರೋಗ್ಯದ ಬಗ್ಗೆ ಗಮನಹರಿಸಬೇಕು.ಇವತ್ತು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಬಹಳಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದೀರಿ .ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಅನಿತಾ ಜಯಂತಗೌಡರವರು ಮಾತನಾಡುತ್ತಾ ಇವತ್ತು ಪ್ರತಿಯೊಬ್ಬ ವ್ಯಕ್ತಿಯೂ ಅಭಿವೃದ್ಧಿಯಾಗಿದ್ದಾರೆಂದರೆ ಅದು ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಿಂದ ಮಹಿಳೆಯರು ಅದೆಷ್ಟೋ ಬದಲಾವಣೆಯನ್ನು ಹೊಂದಿರುತ್ತಾರೆ ಎಂದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಯಶವಂತ್ ರವರು ಮಾತನಾಡುತ್ತಾ ಮಹಿಳೆಯರು ನಾಲ್ಕು ಗೋಡೆಯ ಮಧ್ಯದಿಂದ ಹೊರಬಂದು ಸಮಾಜದಲ್ಲಿ ಗೌರವಯುತರಾಗಿ ಬದುಕಬೇಕಾದರೆ ಅದಕ್ಕೆ ಗ್ರಾಮಾಭಿವೃದ್ದಿ ಯೋಜನೆಯೇ ಕಾರಣ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆಯುವಂತೆ ತಿಳಿಸಿದರು.

ವೇದಿಕೆಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅದ್ಯಕ್ಷರಾದ ರಂಗನಾಥ್ , ಒಕ್ಕೂಟದ ಅಧ್ಯಕ್ಷರಾದ ಶಶಿಧರ್ ಜಿ ಯವರು ವಲಯ ಮೇಲ್ವಿಚಾರಕರಾದ ಪ್ರಶಾಂತ್ ರವರು ಉಪಸ್ಥಿತರಿದ್ದರು

.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ಕೇಂದ್ರದ ಸದಸ್ಯರಾದ ಉಮ್ಮಕ್ಕರವರು ವಹಿಸಿದ್ದರು

.ಕಾರ್ಯಕ್ರಮದಲ್ಲಿ ಹಾಜರಾತಿ & ಆಟೋಟ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಜ್ಞಾನವಿಕಾಸ ಸಮನ್ವಯಧಿಕಾರಿಯವರಾದ ಮಧುರಾ ವಸಂತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸದಸ್ಯರಾದ ಹರಿಣಾಕ್ಷಿ ಸ್ವಾಗತಿಸಿ, ಪುಷ್ಪ ಧನ್ಯವಾದವಿತ್ತರು. ಸೇವಾಪ್ರತಿನಿಧಿ ಆನಂದ್ ವರದಿ ವಾಚಿಸಿದರು.

Related posts

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಯುವವಾಹಿನಿ ಸಂಚಲನ ಸಮಿತಿಯ ಅಧ್ಯಕ್ಷರಾಗಿ ರಿತೇಶ್ ರೆಂಜಾಳ ಮತ್ತು ಕಾರ್ಯದರ್ಶಿಯಾಗಿ ಉದಯ ಮಾಚಾರ್ ಆಯ್ಕೆ‌

Suddi Udaya

ಬೆಳ್ತಂಗಡಿ ಮಹಿಳಾ ವೃಂದದ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ನೇತ್ರಾ ಅಶೋಕ್, ಪ್ರ.ಕಾರ್ಯದರ್ಶಿಯಾಗಿ ಪ್ರೀತಿ ರತೀಶ್ ರಾವ್, ಕೋಶಾಧಿಕಾರಿಯಾಗಿ ರೇಖಾ ಸುಧೀರ್ ರಾವ್

Suddi Udaya

ಗ್ರಾ.ಪಂ. ಮಟ್ಟದ ಸಂಜೀವಿನಿ ಮುಖ್ಯಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದಿಂದ ಬೆಂಗಳೂರುನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬೆಳ್ತಂಗಡಿ ತಾಲೂಕು ವಕ್ತಾರರಾಗಿ ಸಂದೀಪ್ ಎಸ್ ನೀರಲ್ಕೆ ನೇಮಕ

Suddi Udaya
error: Content is protected !!