September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಿಕಟ ಪೂರ್ವ ರಾಜಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶ್ರೀ ರಾಮಸ್ವಾಮಿ(ವಿಸಿಎನ್ಆರ್ ಗ್ರೂಪ್) ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ :ಸ್ಪೇಸ್ ಮೀಡಿಯಾ,ಅದನಿ ಗ್ರೂಪ್ ಆಫ್ ಕಂಪನಿ ಅರ್ಪಿಸುವ ಗಾಂಧಿ ಸ್ಮೃತಿ,ನಮ್ಮ ನಡೆ ಗಾಂಧಿ‌ ತತ್ವದೆಡೆ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ರಾಜಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶ್ರೀ ರಾಮಸ್ವಾಮಿ(ವಿಸಿಎನ್ಆರ್ ಗ್ರೂಪ್) ಅವರಿಗೆ ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರು ಗಾಂಧಿ ಭವನದಲ್ಲಿ ಇಂದು ನ.6 ರಂದು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದ್ದು,ಹಲವಾರು ಉಪಯುಕ್ತ ಸೇವೆ ಸಲ್ಲಿಸಿದರ ಫಲವಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು ಯು.ಟಿ ಖಾದರ್, ಎಸ್.ಡಿ.ಎಂ ಶೈಕ್ಷಣಿಕ ಸಮೂಹ ಸಂಸ್ಥೆಗಳ ಉಪಾಧ್ಯಕ್ಷರು ಸುರೇಂದ್ರ ಕುಮಾರ್ ಧರ್ಮಸ್ಥಳ, ದಾವಣಗೆರೆ ಮಹಾರಾಜ ಸೋಪ್ಸ್ ಆಂಡ್ ಡಿರ್ಟಜೆಂಟ್ ಪ್ರೈವೇಟ್ ಲಿ. ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎಂ. ಇ ರವಿರಾಜ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕಾರ್ಯಕ್ರಮ ನಿರ್ವಹಣಾ ಸಮಿತಿಯ ಅಧ್ಯಕ್ಷ ಕೆ. ಕೇಶ ಶಯನ, ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧೀಕಾರದ ಸಿಇಒ ಡಾ| ಅಶೋಕ್ ದಾಳವಾಯಿ, ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್‍ಸ್ ಮಾಲಕ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ, ಸಂಧ್ಯಾ ಪ್ರೆಶ್ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ಘಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅರ್ಚನಾ ರಾಜೇಶ್ ಪೈ ಇತರರು ಉಪಸ್ಥಿತರಿದ್ದರು.

Related posts

ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಕಣಿಯೂರು ಗುತ್ತು ಮನೆಗೆ ಭೇಟಿ

Suddi Udaya

ಬೆಳ್ತಂಗಡಿ ಆಭರಣ ಜ್ಯುವೆಲ್ಲರ್ಸ್ ಗೆ ಐಟಿ ದಾಳಿ

Suddi Udaya

ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ವಿಶೇಷ ಕೌಶಲ್ಯ ತರಬೇತಿ “ಐಸ್ ಬ್ರೇಕಿಂಗ್ ಸೆಷನ್” ಕಾರ್ಯಾಗಾರ

Suddi Udaya

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ- ನಿಟ್ಟಡೆ ವತಿಯಿಂದ ಗುರುನಮನ ಕಾರ್ಯಕ್ರಮ

Suddi Udaya

ವಲಯ ಮಟ್ಟದ ಕೌಶಲ್ಯ ಸ್ಪರ್ಧೆ: ಆದರ್ಶ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!