25 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ : ಸಿಬಿಐ ಮೇಲ್ಮನವಿ

ಬೆಳ್ತಂಗಡಿ : ಸೌಜನ್ಯಾ, ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯನ್ನು ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಈಗ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ವಿಚಾರಣ ನ್ಯಾಯಾಲಯ ತೀರ್ಪು ನೀಡಿದ 4 ತಿಂಗಳ ಬಳಿಕ ಮೇಲ್ಮನವಿ ಸಲ್ಲಿಸಲಾಗಿದೆ.

ಪ್ರಕರಣದ ಆರೋಪಿ ಸಂತೋಷ್ ರಾವ್‌ ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ 2023ರ ಜೂನ್ 16ರಂದು ತೀರ್ಪು ನೀಡಿತ್ತು. ಮೇಲ್ಮನವಿ ಸಲ್ಲಿಸಲು ಸಿಬಿಐಗೆ 60 ದಿನಗಳ ಕಾಲಾವಕಾಶ ಸಹ ನೀಡಲಾಗಿತ್ತು. ಆದರೆ 4 ತಿಂಗಳ ಬಳಿಕ ಸಿಬಿಐ ಮೇಲ್ಮನವಿ ಸಲ್ಲಿಸಿದೆ. 2012ರ ಅಕ್ಟೋಬರ್ 12ರಂದು ಸೌಜನ್ಯಾ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಸಂತೋಷ್ ರಾವ್‌ನನ್ನು ಬಂಧಿಸಿದ್ದರು. ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ 11 ವರ್ಷಗಳ ಬಳಿಕ ಆರೋಪಿ ನಿರ್ದೋಷಿ ಎಂದು ವಿಚಾರಣ ನ್ಯಾಯಾಲಯ ತೀರ್ಪು ನೀಡಿತ್ತು. ಈ ಮಧ್ಯೆ ಪ್ರಕರಣದ ಮರು ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

Related posts

ಶ್ರೀ ಕ್ಷೇತ್ರ ತೆಕ್ಕಾರಿಗೆ ಶಾಸಕ ಹರೀಶ್ ಪೂಂಜಾ ಭೇಟಿ : ಕ್ಷೇತ್ರದ ರಸ್ತೆಗೆ ಶಾಸಕರ ನಿಧಿಯಿಂದ ರೂ‌.10 ಲಕ್ಷ ಡಾಂಬರೀಕರಣ

Suddi Udaya

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಎಸ್‌.ಡಿ.ಎಂ ಮನೋವಿಜ್ಞಾನ ವಿಭಾಗ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಬಗೆಯ ಅನನ್ಯ ಕಾರ್ಯಕ್ರಮಗಳ ಪ್ರಯೋಗ

Suddi Udaya

ಉಜಿರೆ ಲಲಿತನಗರ ನಿವಾಸಿ ಲೀಲಾವತಿ ನಿಧನ

Suddi Udaya

ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ

Suddi Udaya

ಶಿರ್ಲಾಲು ಕೃಷಿಕ ಶಿವಪ್ಪ ಪೂಜಾರಿ ನಿಧನ

Suddi Udaya

ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

Suddi Udaya
error: Content is protected !!