38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಣಿ ಆಂ.ಮಾ. ಶಾಲೆಯಲ್ಲಿ ನೂತನ ಕಬ್ & ಬುಲ್ ಬುಲ್ ದಳಗಳ ಉದ್ಘಾಟನಾ ಸಮಾರಂಭ


ಬೆಳ್ತಂಗಡಿ : ವಾಣಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ & ಗೈಡ್ಸ್‌ನ ಪ್ರಾಥಮಿಕ ವಿಭಾಗದ ಕಬ್‌ ಮತ್ತು ಬುಲ್ ಬುಲ್ ದಳಗಳ ಉದ್ಘಾಟನಾ ಸಮಾರಂಭವು ಅ.9 ರಂದು ನೆರವೇರಿತು.
ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಭಾರತ್ ಸ್ಕೌಟ್ಸ್&ಗೈಡ್ಸ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಟಿ. ಜಯಾನಂದಗೌಡಇವರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ತಿಳಿಸುವುದರೊಂದಿಗೆ ಶುಭಹಾರೈಸಿದರು.


ಮುಖ್ಯ ಅತಿಥಿಗಳಾಗಿ ಭಾರತ್‌ ಸ್ಕೌಟ್ಸ್& ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿಗಳಾಗಿರುವ ಶ್ರೀಮತಿ ಪ್ರಮೀಳಾ ಇವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ & ಗೈಡ್ಸ್, ಕಬ್ & ಬುಲ್‌ಬುಲ್‌ತಂಡದ ಬಗ್ಗೆ ಮಾರ್ಗದರ್ಶನ ನೀಡಿದರು.


ಸಮಾರಂಭದ ಅಧ್ಯಕ್ಷರಾದ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಲಕ್ಷ್ಮೀನಾರಾಯಣ ಕೆ. ಇವರು ರಾಜ್ಯ ಸಂಸ್ಥೆಯ ಆದೇಶದಂತೆ ಜಿಲ್ಲಾಸಂಸ್ಥೆಯಿಂದ ಬಂದಂತಹ ಧ್ವಜದ ಚೀಟಿ ಬಿಡುಗಡೆಗೊಳಿಸಿ, ಸ್ಕೌಟ್ಸ್ &ಗೈಡ್ಸ್‌ನಲ್ಲಿ ಸಿಗುವ ಎಲ್ಲಾ ಸದಾವಕಾಶಗಳನ್ನು ಬಳಸಿಕೊಳ್ಳಬೇಕೆಂಬ ಆಶಯದೊಂದಿಗೆ ಶುಭಹಾರೈಸಿದರು.


ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಹಾಸಿನಿ, ಗೈಡ್ ಲೀಡರ್‌ಗಳಾದ ಶ್ರೀಮತಿ ಶೋಭಾ ನವೀನ್ , ಶ್ರೀಮತಿ ಸುಮಲತಾ ಎ, ಕಬ್ ಮಾಸ್ಟರ್‌ಕು| ಹೇಮಲತಾ ಮತ್ತು ಫ್ಲಾಕ್ ಲೀಡರ್ ಶ್ರೀಮತಿ ನಮಿತಾ ಉಪಸ್ಥಿತರಿದ್ದರು.


ಸ್ಕೌಟ್ಸ್&ಗೈಡ್ಸ್ ದಳದ ವಿದ್ಯಾರ್ಥಿಗಳಾದ ಕು| ಮಾನ್ಯ ಮತ್ತು ಮಾ|ಕುಶನ್‌ಕಾರ್ಯಕ್ರಮ ನಿರೂಪಿಸಿ, ಫ್ಲಾಕ್ ಲೀಡರ್ ನಮಿತಾ ಸ್ವಾಗತಿಸಿ, ಕಬ್ ಮಾಸ್ಟರ್ ಹೇಮಲತಾ ವಂದನಾರ್ಪಣೆಗೈದರು.

Related posts

ಕಪಿಲಾ ನದಿ ಕಿರು ಸೇತುವೆ ದುರಸ್ತಿ ಸಮಿತಿ ಜಮೆ-ಖರ್ಚುಗಳ ಸಭೆ

Suddi Udaya

ಡಿ.4: ಬೆಳ್ತಂಗಡಿಯಲ್ಲಿ ಮಂಜೂಷ ಗ್ಲಾಸ್ & ಪ್ಲೈವುಡ್ಸ್ ಮಳಿಗೆ ಶುಭಾರಂಭ

Suddi Udaya

ಮಡಂತ್ಯಾರು ಮಿತ್ರಾ ವ್ಹೀಲ್ ಮಾಸ್ಟರ್ ಶುಭಾರಂಭ

Suddi Udaya

ಪಟ್ರಮೆ ದಡಂತಮಲೆ ಅರಣ್ಯದಲ್ಲಿ ಅಕ್ರಮವಾಗಿ ಕಡವೆ ಭೇಟೆ – ಕೊವಿ ಸಹಿತ ಮೂವರನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಅರಣ್ಯ ಇಲಾಖೆ

Suddi Udaya

ನಾರಾವಿ ವಲಯದ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

Suddi Udaya
error: Content is protected !!