28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳ: ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ನಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರಗಿತು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀಮತಿ ಅಂಬಾ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್ ಮಾತನಾಡಿ ಪ್ರತಿಷ್ಠಾನದ ಸೇವಾ ಕಾರ್ಯಗಳು ನಿಸ್ವಾರ್ಥದಿಂದ ಕೂಡಿದ್ದು ಸದಸ್ಯರ ಬದ್ಧತೆಯಿಂದ ಉತ್ತಮ ಕಾರ್ಯಗಳು ನಡೆಯುವಂತಾಗಲಿ ಎಂದು ತಿಳಿಸಿ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಡಿ. 17 ರಂದು ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವವನ್ನು ನಡೆಸಲಾಗುವುದೆಂದರು.

ಪ್ರತಿಷ್ಠಾನದ ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಸುವರ್ಣ ಮತ್ತು ಉದಯಶಂಕರ ರೈ ಪುಣಚ ಉತ್ತರ ಭಾರತದ ತೀರ್ಥಕ್ಷೇತ್ರಗಳ ಯಾತ್ರೆಯ ಅನುಭವವನ್ನು ಹಂಚಿಕೊಂಡರು. ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣಗೌಡ ಮಾತನಾಡಿ ಸೇವಾ ಪ್ರತಿಷ್ಠಾನದ ವತಿಯಿಂದ ಬಾಲ್ಯ ಮತ್ತು ಕೌಮಾರ್ಯವಸ್ಥೆಯಲ್ಲಿರುವ ಪೀಳಿಗೆಗೆ ಮೌಲ್ಯಯುತ ಜೀವನ ನಡೆಸಲು ಹಿರಿಯರ ಅನುಭವದ ವಿನಿಯೋಗವಾಗಬೇಕೆಂದರು.

ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ ಧರ್ಮಸ್ಥಳ ವಾರ್ಷಿಕೋತ್ಸವದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ಮಾಡಿದರು.

ಪ್ರತಿಷ್ಠಾನದ ಪದಾಧಿಕಾರಿಗಳಾದ ಅನಾರು ಕೃಷ್ಣಶರ್ಮ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಮನಮೋಹನ ರಾವ್ ಬಿ.ಸಿ ರೋಡು, ಚಂದ್ರಶೇಖರ ಆಳ್ವ ಪಡುಮಲೆ , ಸೀತಾರಾಮ ಶೆಟ್ಟಿ ಉಜಿರೆ,ಸಂಜೀವ ಪಾರೆಂಕಿ, ರಾಘವ .ಎಚ್ ಗೇರುಕಟ್ಟೆ , ಗಣೇಶ ಭಟ್ ಕುತ್ರೊಟ್ಟು, ದೇವಳದ ಕಚೇರಿ ವ್ಯವಸ್ಥಾಪಕ ಗಿರೀಶ್ ಶೆಟ್ಟಿ ನಾಳ ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ತೆಂಕುತಿಟ್ಟಿನ ಹಿರಿಯ ಹಾಸ್ಯಗಾರ ಪೆರ್ವೊಡಿ ನಾರಾಯಣ ಭಟ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ದ.ಕ ಜಿಲ್ಲಾ ಗಮಕ ಕಲಾಪರಿಷತ್ತಿನ ಅಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯ ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕಾರ ನೀಡಿದರು.

ಪ್ರತಿಷ್ಠಾನದ ಸಹ ಸಂಚಾಲಕರಾದ ಭಾಸ್ಕರ ಬಾರ್ಯ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ದುಗ್ಗಪ್ಪ.ಯನ್ ಕಾರ್ಯಕ್ರಮ ನಿರೂಪಿಸಿದರು.

Related posts

ಬಳಂಜ: ಅಟ್ಲಾಜೆ ಅಂಗನವಾಡಿ ಶಿಕ್ಷಕಿ ಜಾನಕಿ ಹೃದಯಾಘಾತದಿಂದ ನಿಧನ

Suddi Udaya

ಕಣಿಯೂರು ಗ್ರಾ.ಪಂ. ಸದಸ್ಯನಿಗೆ ಹಲ್ಲೆ ಪ್ರಕರಣ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟ

Suddi Udaya

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಿಂದ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Suddi Udaya

ಎಸ್ ಕೆ ಎಸ್ ಎಸ್‌ ಎಫ್ ಮದ್ದಡ್ಕ ಶಾಖೆಯ ವತಿಯಿಂದ ಕುವೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಣೆ

Suddi Udaya

ಬಂದಾರು: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ರಿಕ್ಷಾ ಚಾಲಕ ಸಹಿತ ಇಬ್ಬರ ಬಂಧನ

Suddi Udaya

ಫೋಟೊಗ್ರಾಫಿ ಸ್ಫರ್ಧೆ: ಡಾ. ಚಂದ್ರಹಾಸ್ ಚಾರ್ಮಾಡಿ ಪ್ರಥಮ

Suddi Udaya
error: Content is protected !!