ಪಟ್ರಮೆ : ಸ್ಪಂದನ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇದರ ವಾರ್ಷಿಕ ಮಹಾಸಭೆಯನ್ನು ನ.10 ರಂದು ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಟ್ರಮೆ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ರೇಖಾ , ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ, ತಾಲೂಕು ಮ್ಯಾನೇಜರ್ ನಿತೇಶ್ , ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮ್ಮಿ ಬಿ.ಪಿ, ಒಕ್ಕೂಟದ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಮಹಾಸಭೆಯನ್ನು ಪ್ರಾರಂಭಿಸಲಾಯಿತು.
ತಾಲೂಕು ಮ್ಯಾನೇಜರ್ ನಿತೇಶ್ ಒಕ್ಕೂಟದ ನಿಯಮ ನಿಬಂಧನೆಗಳು , ಕೃಷಿಯೇತರ ಚಟುವಟಿಕೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು. ಈ ಸಂಧರ್ಭದಲ್ಲಿ KSRLPS ಬೆಳ್ತಂಗಡಿಯ NRLM ನ MIS ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಪ್ರಶಸ್ತಿಯನ್ನು ಪಡೆದಿರುವ ನಿತೇಶ್ ಇವರನ್ನು ಅಭಿನಂದಿಸಲಾಯಿತು.
ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾ ನೂತನ ಪದಾಧಿಕಾರಿಗಳ ಜವಾಬ್ಧಾರಿ, ಕಾರ್ಯವೈಖರಿ ಬಗ್ಗೆ ಮಾರ್ಗದರ್ಶನ ನೀಡಿದರು. ಒಕ್ಕೂಟದಿಂದ ನಿರ್ಗಮಿಸಿದ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಒಕ್ಕೂಟದ ನೂತನ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ದಾಖಲಾತಿಗಳನ್ನು ನೀಡುವುದರ ಮೂಲಕ ಅಧಿಕಾರವನ್ನು ಹಸ್ತಾಂತರಿಸಲಾಯಿತು ಹಾಗೂ ಆರ್ಥಿಕ ಸಾಕ್ಷರತಾ ಆಪ್ತ ಸಮಾಲೋಚಕಿ ಶ್ರೀಮತಿ ಉಷಾ ರವರು ಉಪಸ್ಥಿತಿ ಇದ್ದು ಬ್ಯಾಂಕಿನಲ್ಲಿ ಸಿಗುವಂತಹ ಸಾಲ ಸೌಲಭ್ಯ ಹಾಗೂ PMJJY,PMSBY ಸುರಕ್ಷಾ ಬಗ್ಗೆ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ಮ್ಯಾನೇಜರ್ ಉಪಸ್ಥಿತರಿದ್ದರು. ಸಿಹೆಚ್ ಒ ಭುವನೇಶ್ವರಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಸ್ತ್ರೀ ಶಕ್ತಿ ಹಾಗೂ ಸಂಜೀವಿನಿ ಸಂಘದ ಸದಸ್ಯ ರು ಉಪಸ್ಥಿತರಿದ್ದರು. ಎಮ್.ಬಿ.ಕೆ ಶ್ರೀಮತಿ ಜಯಾ ರವರು ಕಾರ್ಯಕ್ರಮ ನಿರೂಪಿಸಿ LCRP ಶ್ರೀಮತಿ ನಳಿನಿರವರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ವಿನಂತಿನಿ ವರದಿ ಮಂಡಿಸಿದರು. ಶ್ರೀಮತಿ ನಳಿನಿ ರವರು ಜಮಾ ಖರ್ಚು ಮಂಡನೆ ಮಾಡಿದರು. ಪಶು ಸಖಿ ಶ್ರೀಮತಿ ಅಕ್ಷತಾ ಧನ್ಯವಾದ ನೀಡಿದರು ಹಾಗೂ ರಾಷ್ಟ್ರಗೀತೆ ಯೊಂದಿಗೆ ಮಹಾಸಭೆಯನ್ನು ಮುಕ್ತಾಯಗೊಳಿಸಲಾಯಿತು.