26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕೊಕ್ಕಡ : ಮಾಯಿಲಕೋಟೆ ದೇವಸ್ಥಾನದಲ್ಲಿ ಕಳ್ಳತನ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೊಕ್ಕಡ :ಇಲ್ಲಿಯ ಮಾಯಿಲಕೋಟೆ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಸಿಕ್ಕಿಹಾಕಿಕೊಂಡ ಘಟನೆ ನ.10ರಂದು ನಡೆದಿದೆ.

ಒಂದು ತಿಂಗಳ ಹಿಂದೆ ಇಲ್ಲಿ ಕಳ್ಳತನ ನಡೆದಿದ್ದು, ಈ ಬಗ್ಗೆ ದೇವಸ್ಥಾನದಲ್ಲಿ ಕಳ್ಳತನ ಮಾಡಿದವರ ಬಗ್ಗೆ ಒಂದು ತಿಂಗಳೊಳಗೆ ಸುಳಿವು ಸಿಗುವಂತೆ ದೇವಸ್ಥಾನದಲ್ಲಿ ಪ್ರಾರ್ಥಿಸಲಾಗಿತ್ತು. ಅಂತೆಯೇ ದೇವರ ಕಾರ್ಣಿಕದಿಂದ ಒಂದು ತಿಂಗಳೊಳಗೆ ಕಳ್ಳರು ಪತ್ತೆಯಾಗಿದ್ದಾರೆ.

ನ.10 ರಂದು ಮಧ್ಯಾಹ್ನದ ಸಮಯ ಕಳ್ಳರು ಕಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ದೊಡ್ಡದಾದ ಶಬ್ದವೊಂದು ಕೇಳಿಸಿದ್ದು ಪರಿಸರದ ಜನರೆಲ್ಲ ಒಟ್ಟಾಗಿ ದೇವಸ್ಥಾನದ ಬಳಿ ತೆರಳಿದಾಗ ಕಳ್ಳ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಎನ್ನಲಾಗಿದೆ. ತಕ್ಷಣ ಸ್ಥಳೀಯರ ಸಹಕಾರದಿಂದ ಕಳ್ಳನನ್ನು ಹಿಡಿದು ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು.


ಕಳ್ಳತನಕ್ಕೆ ಯತ್ನಿಸಿದ್ದವನನ್ನು ಹುಬ್ಬಳ್ಳಿಯ ಮಂಜುನಾಥ (19.ವ) ಎಂದು ಗುರುತಿಸಲಾಗಿದ್ದು, ಈತನ ಜೊತೆಗೆ ಸಹಕರಿಸಲು ಇನ್ನಿತರರು ಇದ್ದಾರೆಯೇ ಎಂಬುದನ್ನು ಮುಂದಿನ ತನಿಖೆಯಲ್ಲಿ ತಿಳಿಯಬೇಕಿದೆ.

ಮಾಯಿಲಕೋಟೆಯಲ್ಲಿ ಕಳ್ಳತನ ನಡೆಸುವ ಮೊದಲು ಇಲ್ಲೇ ಸಮೀಪದ ಪುತ್ತೆ ಎಂಬಲ್ಲಿನ ವ್ಯಕ್ತಿ ಒಬ್ಬರ ರೂ 35000 ಬೆಲೆ ಬಾಳುವ ಸೈಕಲನ್ನು ಈತ ಕದ್ದಿದ್ದ ಎನ್ನಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಬೆಳ್ತಂಗಡಿಯ ಸಿಮ್ರಾ ಪರ್ವಿನ್ ಗೆ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಮೂಲಕ ಶಿಕ್ಷಣ ಸಚಿವರಿಂದ ಸನ್ಮಾನ

Suddi Udaya

ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾದ ಕಾಜೂರಿನ ಸಯ್ಯದ್ ಅನ್ವರ್

Suddi Udaya

ಮಡಂತ್ಯಾರು ಶ್ರೀ ಮಾರಿಕಾಂಬಾದೇವಿ ದೇವಸ್ಥಾನದ ಜೀರ್ಣೋದ್ವಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧನಸಹಾಯ

Suddi Udaya

ಉಜಿರೆ ಸಂತ ಅಂತೋನಿ ಚರ್ಚ್ ನಿಂದ ಅರ್ಹ ಕುಟುಂಬದ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

Suddi Udaya

ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಎಂ. ಗಂಗಾಧರ ಮಿತ್ತಮಾರ್, ಪ್ರಧಾನ ಸಂಚಾಲಕರಾಗಿ ಪಿ. ಎಚ್. ನಿತ್ಯಾನಂದ ಶೆಟ್ಟಿ ನೇಮಕ

Suddi Udaya
error: Content is protected !!