ಉಜಿರೆ: ಬೆಳೆಯುತ್ತಿರುವ ಉಜಿರೆ ನಗರಕ್ಕೆ ಡಾ| ಸೂರಜ್ ರವರ ಡೆಂಟಲ್ ಕ್ಲಿನಿಕ್ ಹೊಸ ಮುತ್ತು. ಮನುಷ್ಯನ ಆರೋಗ್ಯದ ಜಾಗೃತಿಯಿಂದ ವೈದ್ಯರಿಗೆ ಸೇವೆ ಮಾಡುವ ಅವಕಾಶ ದೊರೆತಿದೆ. ದಂತದ ಆರೋಗ್ಯದ ಬಗೆಗೆ ಜನರು ಜಾಗೃತರಾಗಿದ್ದಾರೆ. ಮುಖದ ಅಂದ ಹೆಚ್ಚಿಸಲು ಹಾಗೂ ದಂತದ ಸಂರಕ್ಷಣೆಗೆ ದಂತ ವೈದ್ಯರ ಸೇವೆ ಅಗತ್ಯವಿದೆ. ಶೈಕ್ಷಣಿಕ ಕೇಂದ್ರದ ಪರಿಸರದ ಜನರು ದಂತ ವೈದ್ಯಕೀಯ ಸೇವೆಯ ಪ್ರಯೋಜನ ಪಡೆಯಬೇಕೆಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ಅವರು ನ.12 ರಂದು ಉಜಿರೆಯ ಪಾರಿಜಾತ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಡಾ|ಸೂರಜ್ ಅವರ ಡೆಂಟಲ್ ಕ್ಲಿನಿಕನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು. ಅಶ್ವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ| ಅಶ್ವಿ ನ್ ಉದ್ಯಾವರ, ಡಾ| ಚಾರುಲತಾ ,ಸೌತಡ್ಕ ದೇವಸ್ಥಾನದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಡಾ| ಪ್ರಕಾಶ್, ಸುಳ್ಯ ಕೆ.ವಿ.ಜಿ. ಕಾಲೇಜಿನ ಡೀನ್ ಡಾ| ಮೋಕ್ಷ ನಾಯಕ್,ನಿಟ್ಟೆ ವಿ.ವಿ.ಯ ಪರೀಕ್ಷಾ ಕೇಂದ್ರದ ಡಾ|ಪ್ರಸಾದ್.,ಪದ್ಮ ಗೌಡ ,ಡಾ| ಗೋಪಾಲಕೃಷ್ಣ,ಡಾ| ಎಂ.ಎಂ . ದಯಾಕರ್ , ಮಂಗಳೂರು ಶ್ರೀನಿವಾಸ್ ಡೆಂಟಲ್ ಕಾಲೇಜಿನ ಡಾ!ಕೃಪಾಲ್ ಮೊದಲಾದವರು ಆಗಮಿಸಿ ಶುಭ ಕೋರಿದರು.
ಧರ್ಮಸ್ಥಳದ ಗಿರೀಶ್ ಕುದ್ರೆನ್ತಯ, ಧನಂಜಯ ರಾವ್, ಮುಖ್ಯ ಶಿಕ್ಷಕ ಸುರೇಶ ಕೆ, ರವಿಪ್ರಕಾಶ್ ರಾವ್, ವೆಂಕಟೇಶ್, ಮೊದಲಾದವರು ಆಗಮಿಸಿ ನೂತನ ಉದ್ಯಮಕ್ಕೆ ಶುಭ ಹಾರೈಸಿದರು. ಡಾ| ಸೂರಜ್ ಸ್ವಾಗತಿಸಿ, ಶಿಕ್ಷಕ ರಾಧಾಕೃಷ್ಣ ಕೆರ್ಮುಣ್ಣಾಯ ನಿರೂಪಿಸಿ, ವಂದಿಸಿದ ಕಾರ್ಯಕ್ರಮದಲ್ಲಿ ಶ್ರೀಶ ಕೆರ್ಮುಣ್ಣಾಯ ಪ್ರಸ್ತಾವಿಸಿದರು.