ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ

Suddi Udaya

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ನ.14 ರಂದು ದೀಪಾವಳಿ ಹಬ್ಬದ ಪ್ರಯುಕ್ತ ಕಾಮಧೇನು ಗೋ ಶಾಲೆಯಲ್ಲಿ ಗೋ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾಮಧೇನು ಗೋ ಶಾಲೆಯಲ್ಲಿ ಎಲ್ಲಾ ಗೋವುಗಳನ್ನು ಪೂಜಿಸಿ ಗೋಗ್ರಾಸ ನೀಡಲಾಯಿತು. ಕ್ಷೇತ್ರದ ಅರ್ಚಕರಾದ ಗುರುರಾಜ್ ಇವರು ಗೋ ಪೂಜೆಯನ್ನು ನೆರವೇರಿಸಿದರು.

ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಹಿರಿಯರು, ಮಾರ್ಗದರ್ಶಕರು, ಗೋ ಪ್ರೇಮಿಯೂ ಆದ ವಿಧಾನ ಪರಿಷತ್ ಸದಸ್ಯರಾಗಿರುವ ಪ್ರತಾಪ್ ಸಿಂಹ ನಾಯಕ್ ಭಾಗವಹಿಸಿ ಗೋ ಪೂಜೆ ಮತ್ತು ಗೋವು ಇದರ ಮಹತ್ವ ದ ಬಗ್ಗೆ ಸಭೆಗೆ ತಿಳಿಸಿದರು.

ವೇದಿಕೆಯಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರು, ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ತಾಲೂಕು ಪಶುವೈದ್ಯಾಧಿಕಾರಿಗಳಾದ ಮಂಜಯ್ಯ ನಾಯ್ಕ್, ಕೊಕ್ಕಡ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಪ್ರಭಾಕರಗೌಡ ಮಲ್ಲಿಗೆ ಮಜಲು, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ರಾವ್ ಮುಂಡ್ರುಪಾಡಿ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ ವಿ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರೀಶ್ ರಾವ್ ಮುಂಡ್ರುಪಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿ ಅತಿಥಿಗಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಕಾಮದೇನು ಗೋ ಶಾಲೆಯಲ್ಲಿ ನಿತ್ಯ ಗೋ ಸೇವೆಯಲ್ಲಿ ತೊಡಗಿರುವ ಕ್ಷೇತ್ರದ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪುರಂದರ ಕಡೀರ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಪ್ರಶಾಂತ ಪೂವಾಜೆ. ವಿಟ್ಟಲಕುರ್ಲೆ, ಶ್ರೀಮತಿ ಹೇಮಾವತಿ ಶಿವಾನಂದ ಸಂಕೇಶ, ಶ್ರೀಮತಿ ಯಶೋಧ ಉಮೇಶ ಶಬರಾಡಿ,ಹಾಗೂ ಶ್ರೀಮತಿ ಅನುಪಮಾ ಹರೀಶ್ ರಾವ್ ಮುಂಡ್ರುಪಾಡಿ, ಗಣೇಶ್ ಹಿತ್ತಿಲು ಮತ್ತು ಅನೇಕ ಗೋಪ್ರೇಮಿಗಳು ಉಪಸ್ಥಿತರಿದ್ದರು.

Leave a Comment

error: Content is protected !!