ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ರಕ್ತೇಶ್ವರಿ ಗುಡಿ, ಶ್ರೀ ನಾಗದೇವರ ಕಟ್ಟೆ, ಹಾಗೂ ಶ್ರೀ ಪಂಜುರ್ಲಿ ದೈವದ ಕಟ್ಟೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮವು ನ.16 ರಂದು ನಡೆಸಲಾಯಿತು.
ಈ ಹಿಂದೆ ಕ್ಷೇತ್ರದಲ್ಲಿ ನಡೆಸಲಾದ ತಾಂಬೂಲ ಪ್ರಶ್ನೆಯಲ್ಲಿ ಈ ಸಾನಿಧ್ಯಗಳಿಗೆ ಗುಡಿ ನಿರ್ಮಾಣ ಮಾಡಿ ಪ್ರತಿಷ್ಠಾಪನೆ ಮಾಡಬೇಕಾಗಿ ಕಂಡುಬಂದಿದ್ದು, ಆ ಪ್ರಕಾರವಾಗಿ ಕ್ಷೇತ್ರಕ್ಕೆ ಸ್ಥಳ ಪರಿಶೀಲನೆಗಾಗಿ ವಾಸ್ತು ತಜ್ಞರಾದ ಜಗನ್ನೀವಾಸ ರಾವ್ ಇವರ ನೇತೃತ್ವದಲ್ಲಿ ಈಗಾಗಲೇ ಜಿಲ್ಲಾಧಿಕಾರಿಯವರು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಈಶಾನ್ಯ ಭಾಗದಲ್ಲಿರುವ ಕುಡ್ತುಲ್ಲಾಜೆ ಎಂಬಲ್ಲಿ 0.89 ಎಕರೆ ಭೂಮಿಯನ್ನು ದೇವಸ್ಥಾನದ ಹೆಸರಿಗೆ ಕಾಯ್ದಿರಿಸಿದ್ದ ಭೂಮಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀ ಸತ್ಯಪ್ರಿಯ ಕಲ್ಲೂರಾಯರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಉಳಿದಂತೆ ಕ್ಷೇತ್ರದ ಅರ್ಚಕರಾದ ಸುಬ್ರಹ್ಮಣ್ಯ ತೊಡ್ತಿಲ್ಲಾಯರು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಹಾಗೂ ಸಮಿತಿಯ ಸದಸ್ಯರು, ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರು, ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ವಾಸ್ತು ತಜ್ಞರಾದ ಜಗನ್ನಿವಾಸ್ ರಾವ್, ಕಂಟ್ರಾಕ್ಟ್ ದಾರರಾದ ಅವಿನಾಶ್ ಕುಮಾರ್, ಉದ್ಯಮಿ ಬಾಲಕೃಷ್ಣ ನೈಮಿಷ, ಕೊಕ್ಕಡ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಪ್ರಭಾಕರ್ ಮಲ್ಲಿಗೆ ಮಜಲು, ಯಾದವ್ ಆಚಾರ್ಯ, ತಂಬುರಾನ್, ಹಾಗೂ ಶಿಲ್ಪಿ ಪುರಂದರ, ಕ್ಷೇತ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.