ಬೆಳ್ತಂಗಡಿ: ವ್ಯವಸ್ಥಾಪನ ಸಮಿತಿಗಳ ಅಧಿಕಾರಾವಧಿ ಮುಗಿದಿರುವ ಬೆಳ್ತಂಗಡಿ ತಾಲೂಕಿನ ‘ಸಿ’ ಪ್ರವರ್ಗದ 16 ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.
ಕಲ್ಮಂಜ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಳಕ್ಕೆ ಮುಂಡಾಜೆಯ ಹಿರಿಯ ಪಶು ವೈದ್ಯ ಪರಿವೀಕ್ಷಕ, ಮಚ್ಚಿನ ಮಾಣೂರು ಶ್ರೀ ಧರ್ಮಶಾಸ್ತ್ರಾವು ದೇವಸ್ಥಾನಕ್ಕೆ ಮಚ್ಚಿನ ಗ್ರಾಪಂ ಪಿಡಿಒ, ಮುಂಡಾಜೆಯ ಶ್ರೀ ಮೂರ್ತಿಲ್ಲಾಯಿ ದೈವಸ್ಥಾನಕ್ಕೆ ಮುಂಡಾಜೆ ಗ್ರಾಮಕರಣಿಕ, ಇಂದಬೆಟ್ಟು ಶ್ರೀ ವೀರಭದ್ರ ದೇವಸ್ಥಾನಕ್ಕೆ ಬೆಳಾಲು ಗ್ರಾಪಂ ಕಾರ್ಯದರ್ಶಿ, ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನಕ್ಕೆ ಗರ್ಡಾಡಿ ಗ್ರಾಮಕರಣಿಕ, ಮುಂಡೂರು ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಮುಂಡೂರು ಗ್ರಾಮಕರಣಿಕ, ತೋಟತ್ತಾಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಚಾರ್ಮಾಡಿ ಗ್ರಾಪಂ ಪಿಡಿಒ, ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನಕ್ಕೆ ಮೇಲಂತಬೆಟ್ಟು ಗ್ರಾಪಂ ಕಾರ್ಯದರ್ಶಿ, ನ್ಯಾಯತರ್ಪು ಶ್ರೀ ನಾಳ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಣ್ಣೀರುಪಂತ ಗ್ರಾಪಂ ಪಿಡಿಒ, ಪುದುವೆಟ್ಟು ಶ್ರೀ ಮಿಯ್ಯಾರು ವನದುರ್ಗಾದೇವಿ ದೇವಸ್ಥಾನಕ್ಕೆ ಪುದುವೆಟ್ಟು ಗ್ರಾಮಕರಣಿಕ, ಕರಂಬಾರು ಶ್ರೀ ಕೊರ್ಲಿ ಈಶ್ವರ ದೇವಸ್ಥಾನಕ್ಕೆ ಕರಂಬಾರು ಗ್ರಾಮಕರಣಿಕ, ಇಂದಬೆಟ್ಟು ಶ್ರೀ ಬಂಗಾಡಿ ಹಾಡಿದೈವ ದೈವಸ್ಥಾನಕ್ಕೆ ಬೆಳ್ತಂಗಡಿ ಹೋಬಳಿ ಕಂದಾಯ ನಿರೀಕ್ಷಕ, ಮಿತ್ತಬಾಗಿಲು ಶ್ರೀ ಕೊಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಿತ್ತಬಾಗಿಲು ಗ್ರಾಪಂ ಪಿಡಿಒ, ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕಾಶಿಪಟ್ಣ ಗ್ರಾಪಂ ಪಿಡಿಒ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವೇಣೂರು ಗ್ರಾಮಕರಣಿಕ, ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶಿರ್ಲಾಲು ಪಿಡಿಒ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.