ಇಲಂತಿಲ ನಿವಾಸಿ ನಾರಾಯಣ ಪೂಜಾರಿಯವರು ಅ.24 ರಂದು ಮರದ ಗೆಲ್ಲು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನ.16 ರಂದು ನಿಧನರಾಗಿದ್ದಾರೆ.
ಘಟನೆ ವಿವರ: ಇಳಂತಿಲ ನಿವಾಸಿ ನಾರಾಯಣ ಪೂಜಾರಿ ( 54 ವರ್ಷ) ರವರು ಕೃಷಿ ಕೆಲಸ ಮಾಡಿಕೊಂಡಿದ್ದು,ಅ.24. ರಂದು ಕೆಲಸದಾಳುಗಳಾದ ಚಿನ್ನಯ್ಯ ಮತ್ತು ಬಾಳಪ್ಪ ಎಂಬವರೊಂದಿಗೆ ಇಳಂತಿಲ ಗ್ರಾಮ ಪಾಡೆಂಕಿ ಎಂಬಲ್ಲಿರುವ ಅವರ ತೋಟಕ್ಕೆ ಗೆಲ್ಲು ಕಡಿಯಲೆಂದು ಹೋದವರು ಮದ್ಯಾಹ್ನ ಮರ ಏರಿ ಗೆಲ್ಲು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡವರನ್ನು ಉಪಚರಿಸಿ ಅವರ ಮನೆಯವರು ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷಾ ಬರ ಹೇಳಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು, ಅದರಂತೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕೊಂಡುಹೋಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದ ನಾರಾಯಣ ಪೂಜಾರಿ ಯವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೇ ನ.16 ರಂದು ಮದ್ಯಾಹ್ನ ಮೃತಪಟ್ಟಿರುತ್ತಾರೆ ಎಂಬುದಾಗಿದೆ ನಾರಾಯಣ ಪೂಜಾರಿಯವರ ಪುತ್ರಿ ನಿಶ್ವಿತಾ ದೂರು ನೀಡಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ 44/2023 ಕಲಂ:174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.