27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಲ್ಲವ ಫ್ಯಾಮಿಲಿ‌ ದುಬೈ ವತಿಯಿಂದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆಯವರಿಗೆ ಗೌರವ ಸನ್ಮಾನ

ಬೆಳ್ತಂಗಡಿ: ದುಬೈ ಪ್ರವಾಸ ಕೈಗೊಂಡಿರುವ ಪೊಲೀಸ್ ಇಲಾಖೆಯಲ್ಲಿ‌ ದಕ್ಷ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಯವರನ್ನು ಬಿಲ್ಲವ ಫ್ಯಾಮಿಲಿ‌ ದುಬೈ ವತಿಯಿಂದ ಗೌರವಿಸಿ, ಸನ್ಮಾನಿಸಿದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿ ಬೆಳೆದು ಬಂದ ದಾರಿ, ಅದರೊಂದಿಗೆ ಕ್ಷೇತ್ರದಿಂದ ನಡೆಯುವ ತಾಯಿಗೆ ಪ್ರಿಯವಾದ ಗೆಜ್ಜೆ ಸೇವೆಯ ಮುಖಾಂತರ ನಡೆಯುವ ಯಕ್ಷಗಾನದ ಬಗ್ಗೆ ಹಾಗೂ ಇದಕ್ಕೆಲ್ಲ ಸಹಕರಿಸಿದ ದುಬೈ ಬಿಲ್ಲವರನ್ನು ಸ್ಮರಿಸುತ್ತಾ ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುವ ಬಗ್ಗೆ ಪೀತಾಂಬರ ಹೇರಾಜೆಯವರು ವಿವರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾಗಿರುವ‌‌ ದೀಪಕ್ ಎಸ್ ಪಿ ಮತ್ತು ಸಂಘಟನೆಯ ಮಾಜಿ ಅಧ್ಯಕ್ಷರುಗಳಾಗಿರುವ ಜೀತೆಂದ್ರ ಸುವರ್ಣ, ಮೋಹನ್ ಅತ್ತಾವರ್, ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರು ಉದ್ಯಮಿಗಳಾದ ಸತೀಶ್ ಪೂಜಾರಿ ದುಬೈ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಮಚ್ಚಿನ: ಕುದ್ರಡ್ಕ ನಿವಾಸಿ ಅಣ್ಣಿ ಪೂಜಾರಿ ನಿಧನ

Suddi Udaya

ನಿಡ್ಲೆಯಲ್ಲಿ ಕಾಂಗ್ರೆಸ್ ಬೂತ್ ಸಮಿತಿ ಸಭೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಶಿಕ್ಷಕರ ದಿನಾಚರಣೆ

Suddi Udaya

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿ ನಾವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ನಾವೂರು ನೇಮಕ

Suddi Udaya

ಮೆಲ್ಕಾರು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಇದರ ಕೇಂದ್ರೀಯ ಸಮಿತಿಯ ಸಭೆ

Suddi Udaya

ಕಡಿರುದ್ಯಾವರ: ಗಾಳಿ ಮಳೆಯಿಂದ ದನದ ಹಟ್ಟಿಗೆ ಮರ ಬಿದ್ದು ಸಂಪೂರ್ಣ ಹಾನಿ

Suddi Udaya
error: Content is protected !!