ನಿಡ್ಲೆ : ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ,(ರಿ). ನಿಡ್ಲೆ ಗ್ರಾಮ ಪಂಚಾಯತ್ ಇದರ ವಾರ್ಷಿಕ ಮಹಾಸಭೆಯು ನ.18 ರಂದು ಬರಂಗಾಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶ್ಯಾಮಲ ದೀಪ ಬೆಳಗಿಸುವ ಮುಖೇನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯಲ್ಲಿ ವರದಿ ಮಂಡನೆ ಜಮಾ ಖರ್ಚು ಆಡಿಟ್ ವರದಿ ಮಂಡನೆ ಮಾಡಲಾಯಿತು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ ಸಂಜೀವಿನಿಯ ಬಗ್ಗೆ ಸವಿಸ್ತರವಾಗಿ ಮಾತನಾಡಿದರು ಹಾಗೂ ವಲಯ ಮೇಲ್ವಿಚಾರಕರಾದ ವೀಣಾಶ್ರೀ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ನಡೆಸಿದರು ಹಾಗೂ ಒಕ್ಕೂಟ ರಚನೆಯ ಬಗ್ಗೆ ತಿಳಿಸಿದರು.
ನೂತನ ಒಕ್ಕೂಟದ ಅಧ್ಯಕ್ಷರಾಗಿ ಪ್ರೇಮ, ಕಾರ್ಯದರ್ಶಿಯಾಗಿ ಜಯಶ್ರೀ, ಉಪಾಧ್ಯಕ್ಷರಾಗಿ ಪೂರ್ಣಿಮಾ
ಜತೆ ಕಾರ್ಯದರ್ಶಿಯಾಗಿ ಚಂದ್ರಕಲಾ, ಕೋಶಧಿಕಾರಿಯಾಗಿ ಹೇಮಲತಾ, ಸದಸ್ಯರಾಗಿ ಪುಷ್ಪಲತಾ, ವನಿತಾ, ಸೌಮ್ಯ, ಪ್ರೇಮ ರವರು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಶ್ರೀಮತಿ ಹೇಮಾವತಿ ನಿರೂಪಿಸಿದರು. ಸುಮನಾ ಸ್ವಾಗತಿಸಿ, ಸುಜಾತ ಧನ್ಯವಾದವಿತ್ತರು. ಎಮ್.ಬಿ.ಕೆ ಭವಾನಿ ವರದಿಯನ್ನು ಮಂಡಿಸಿದರು.