25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಯವರ 106ನೇ ಜಯಂತಿ ಆಚರಣೆ

ಬೆಳ್ತಂಗಡಿ.ದೇಶದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿ ಅವರ 106ನೇ ಜಯಂತಿ ಯನ್ನು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಣೆ ಮಾಡಲಾಯಿತು.

ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೇಖರ್ ಕುಕ್ಕೆಡಿ ಮಾತನಾಡಿ ಬ್ಯಾಂಕುಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿಯ ಮೂಲಕ ಭಾರತದ ಆರ್ಥಿಕಾಭಿವೃದ್ಧಿಗೆ ಮುನ್ನುಡಿ ಬರೆದ ದಿಟ್ಟ ನಾಯಕಿ ಇಂದಿರಾ ಅವರು ಭಾರತೀಯರ ಹೃದಯದಲ್ಲಿ ಸದಾ ಅಜರಾಮರ.ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದು ಬಡತನವನ್ನು ನಿರ್ಮೂಲನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಗರೀಬಿ ಹಠಾವೋ ಘೋಷಣೆಯ ಮೂಲಕ ಬಡಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಮಹಿಳೆಯರಿಗೆ, ರೈತರಿಗೆ ಹಲವು ಯೋಜನೆಗಳನ್ನು ರೂಪಿಸಿದ್ದರು. ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ, ಭೂರಹಿತರಿಗೆ ಭೂಮಿಯ ಒಡೆತನ ಸಿಗುವಂತೆ ಮಾಡಿದರು. ರಾಜಧನ ರದ್ದು, ಬ್ಯಾಂಕುಗಳ ರಾಷ್ಟ್ರೀಕರಣ ಇವರ ಕಾಲದ ಪ್ರಮುಖ ಸುಧಾರಣೆಗಳಾಗಿವೆ. ಬಡವರಿಗೆ ಬ್ಯಾಂಕುಗಳ ಸೌಲಭ್ಯ ಸಿಗುವಂತೆ ಮಾಡಿದವರು ಇಂದಿರಾ ಗಾಂಧಿ. ಈ ಎಲ್ಲ ಕಾರ್ಯಕ್ರಮಗಳ ಪರಿಣಾಮವಾಗಿ ಜನ ಅವರನ್ನು ದೇವತೆಯಂತೆ ಕಾಣುತ್ತಿದ್ದರು ಎಂದು ಅವರು ಹೇಳಿದರು.ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಬಂಗೇರ ಕಾಶಿಪಟ್ಣ ಸ್ವಾಗತಿಸಿ.ಗ್ರಾಮೀಣ ಅಧ್ಯಕ್ಷರಾದ ಕೆ ಎಮ್ ನಾಗೇಶ್ ಕುಮಾರ್ ಗೌಡ ಶುಭ ಹಾರೈಸಿದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷರಾದ ಮಹಮ್ಮದ್ ಹನೀಪ್ ,ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಶ್ರೀಮತಿ ಶೋಭಾ ನಾರಾಯಣ ಗೌಡ ,ಯುವ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಹಕಿಮ್ ಕೊಕ್ಕಡ,ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿದೇವ್ ಅರಿಗ,ಹಾಗೂ ಪಕ್ಷದ ಪ್ರಮುಖರಾದ ಯಶೋಧರ ಚಾರ್ಮಾಡಿ ,ಕುಶಾಲಪ್ಪ ಗೌಡ,ರೇವತಿ ಲ್ಯಾಲ, ಶಿರ್ಲಾಲು, ಬೊಮ್ಮಣ್ಣ ಗೌಡ ಪುದುವೆಟ್ಟು, ಕರೀಮ್ ಗೇರುಕಟ್ಟೆ,ನವೀನ್ ಗೌಡ ಸವಣಾಲು,ಶಾಹಿರಬಾನು ಮಾಲಾಡಿ,ರಜತ್ ಗೌಡ ಉಜಿರೆ ,ಸುಧೀರ್ ದೇವಾಡಿಗ,ಮಹಮ್ಮದ್ ಸಿದ್ದಿಕ್ ಮಲೆಬೆಟ್ಟು, ಸಂತೋಷ ಕುಕ್ಕೆಡಿ,ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಉಚಿತ ಫೂಟ್ ಫಲ್ ಥೆರಪಿ ಶಿಬಿರ: ಮಾಹಿತಿ ಕಾರ್ಯಗಾರ

Suddi Udaya

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya

ತೆಕ್ಕಾರು : ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಪತಿ

Suddi Udaya

ಉಜಿರೆಯ ಮೂರು ಅಂಗಡಿಗಳಿಗೆ ಕನ್ನ ಶಟ‌ರ್ ಬೀಗ ಮುರಿದು ನಗದು ಕಳ್ಳತನ

Suddi Udaya

ಮೇ 31: ಉಜಿರೆಯಲ್ಲಿ ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಮಲ್ಟಿ ಶೋರೂಮ್ ಉದ್ಘಾಟನೆ

Suddi Udaya

ಅಮೇರಿಕಾದಲ್ಲಿ ನೆಲೆಸಿದರೂ ಭಾರತೀಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿ ಗೃಹ ಪ್ರವೇಶ

Suddi Udaya
error: Content is protected !!