24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಸಾಂಸ್ಕೃತಿಕ ವೈಭವ “ಕ್ರೀಡಾ ಕಲರವ 2023”

ಸುಲ್ಕೇರಿ: ಶ್ರೀರಾಮ ಶಾಲೆ ಸುಲ್ಕೇರಿಯಲ್ಲಿ ಈ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ವೈಭವದ ಅಂಗವಾಗಿ ” ಕ್ರೀಡಾ ಕಲರವ 2023 ” ವಿವಿದ ಪಂದ್ಯಾಟಗಳು ಹಾಗೂ ಕ್ರೀಡಾಕೂಟಗಳು ನಡೆಯಿತು . ಕ್ರೀಡಾ ಕೂಟವನ್ನು ಶಾಲಾ ಆಡಳಿತ ಸಮಿತಿಯ ಅದ್ಯಕ್ಷ ರಾಜು ಪೂಜಾರಿ ಧ್ವಜಾರೋಹಣವನ್ನು ಹಾಗೂ ಅಳದಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅದ್ಯಕ್ಷ ಶಿವು ಭಟ್ ಕಟ್ಟೂರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಗೌರವಾದ್ಯಕ್ಷ ಗಣೇಶ್ ಹೆಗ್ಡೆ, ಶಾಲಾ ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ನಾರಾಯಣ ಪೂಜಾರಿ , ವಾಣಿ ಆಂಗ್ಲ ಮಾದ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಹರೀಶ್ , ಸುಲ್ಕೇರಿ ಮಹಮ್ಮಾಯಿ ದೇವಸ್ಥಾನದ ಅದ್ಯಕ್ಷರಾದ ವಸಂತ ಪೂಜಾರಿ, ಲಯನ್ಸ್ ಕ್ಲಬ್ ಸುಲ್ಕೇರಿ ಇದರ ಸ್ಥಾಪಕಾದ್ಯಕ್ಷರಾದ ಸುಂದರ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ರವಿ ಶೆಟ್ಟಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷರಾದ ಸಂದೀಪ್ ಶೆಟ್ಟಿ ಉಪಸ್ಥಿತಿತರಿದ್ದರು.

ಶ್ರೀ ರಾಮ ಪ್ರೌಢಶಾಲಾ ಮುಖ್ಯೋಪಾದ್ಯಾಯರಾದ ಪ್ರಮೋದ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ ಇವರು ಧನ್ಯವಾದವಿತ್ತರು. ಶಿಕ್ಷಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್, ಸುಲ್ಕೇರಿ ಸದಸ್ಯರು ಕ್ರೀಡಾ ಕೂಟದ ಯಶಸ್ಸಿಗೆ ಸಹಕಾರ ನೀಡಿದರು

Related posts

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

Suddi Udaya

ಬೆಳ್ತಂಗಡಿ: ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ತೆಂಕಕಾರಂದೂರು: ಅಸೌಖ್ಯದಿಂದ ಚಂದ್ರಾವತಿ ನಿಧನ

Suddi Udaya

ಕಡಿರುದ್ಯಾವರ ದ. ಕ. ಜಿ. ಪಂ ಹಿ. ಪ್ರಾ ಶಾಲೆಯಲ್ಲಿ ಎಸ್.ಡಿ.ಎಮ್.ಸಿ, ಪೋಷಕರ ಸಭೆ ಹಾಗೂ ಶಾಲಾ ಮಕ್ಕಳ ಸಂತೆ ಕಾರ್ಯಕ್ರಮ

Suddi Udaya

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘದಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಎಕ್ಸೆಲ್ ನಲ್ಲಿ ಅಮೆರಿಕಾ ವಿಜ್ಞಾನಿಗಳ ಜೊತೆ ಸಂವಾದ

Suddi Udaya
error: Content is protected !!