September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಸಾಂಸ್ಕೃತಿಕ ವೈಭವ “ಕ್ರೀಡಾ ಕಲರವ 2023”

ಸುಲ್ಕೇರಿ: ಶ್ರೀರಾಮ ಶಾಲೆ ಸುಲ್ಕೇರಿಯಲ್ಲಿ ಈ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ವೈಭವದ ಅಂಗವಾಗಿ ” ಕ್ರೀಡಾ ಕಲರವ 2023 ” ವಿವಿದ ಪಂದ್ಯಾಟಗಳು ಹಾಗೂ ಕ್ರೀಡಾಕೂಟಗಳು ನಡೆಯಿತು . ಕ್ರೀಡಾ ಕೂಟವನ್ನು ಶಾಲಾ ಆಡಳಿತ ಸಮಿತಿಯ ಅದ್ಯಕ್ಷ ರಾಜು ಪೂಜಾರಿ ಧ್ವಜಾರೋಹಣವನ್ನು ಹಾಗೂ ಅಳದಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅದ್ಯಕ್ಷ ಶಿವು ಭಟ್ ಕಟ್ಟೂರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಗೌರವಾದ್ಯಕ್ಷ ಗಣೇಶ್ ಹೆಗ್ಡೆ, ಶಾಲಾ ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ನಾರಾಯಣ ಪೂಜಾರಿ , ವಾಣಿ ಆಂಗ್ಲ ಮಾದ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಹರೀಶ್ , ಸುಲ್ಕೇರಿ ಮಹಮ್ಮಾಯಿ ದೇವಸ್ಥಾನದ ಅದ್ಯಕ್ಷರಾದ ವಸಂತ ಪೂಜಾರಿ, ಲಯನ್ಸ್ ಕ್ಲಬ್ ಸುಲ್ಕೇರಿ ಇದರ ಸ್ಥಾಪಕಾದ್ಯಕ್ಷರಾದ ಸುಂದರ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ರವಿ ಶೆಟ್ಟಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷರಾದ ಸಂದೀಪ್ ಶೆಟ್ಟಿ ಉಪಸ್ಥಿತಿತರಿದ್ದರು.

ಶ್ರೀ ರಾಮ ಪ್ರೌಢಶಾಲಾ ಮುಖ್ಯೋಪಾದ್ಯಾಯರಾದ ಪ್ರಮೋದ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ ಇವರು ಧನ್ಯವಾದವಿತ್ತರು. ಶಿಕ್ಷಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್, ಸುಲ್ಕೇರಿ ಸದಸ್ಯರು ಕ್ರೀಡಾ ಕೂಟದ ಯಶಸ್ಸಿಗೆ ಸಹಕಾರ ನೀಡಿದರು

Related posts

ಜೀರ್ಣೋದ್ದಾರಗೊಳ್ಳುತ್ತಿರುವ ಹಳ್ಳಿಂಗೇರಿ ಶ್ರೀ ಅಯ್ಯಪ್ಪ ಮಂದಿರಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ಮತದಾನದ ಮಾಹಿತಿ ಶಿಬಿರ

Suddi Udaya

ಕಳಿಯ ಗ್ರಾ.ಪಂ. ನಲ್ಲಿ ಹುಚ್ಚು ನಾಯಿ ಉಚಿತ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಖೋ ಖೋ ಪಂದ್ಯಾಟ : ನಯನಾಡು ಸರಕಾರಿ‌ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಮತದಾರ ಪಟ್ಟಿ ತೀವ್ರ ಪರಿಷ್ಕರಣೆಯ ವಿಶೇಷ ಕಾರ್ಯಾಗಾರ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಜೂನಿಯರ್ ತ್ರೋಬಾಲ್ ಚಾಂಪಿಯನ್ ಶಿಪ್ ಗೆ ಆಯ್ಕೆ

Suddi Udaya
error: Content is protected !!