September 6, 2026
ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಬೆಳ್ತಂಗಡಿ – ಉಪ್ಪಿನಂಗಡಿ ಅರಣ್ಯ ಉಪವಿಭಾಗದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಪ್ರಕರಣ, ಬೆಳೆ ಹಾನಿಗೊಳಗಾದ ಸಂತ್ರಸ್ಥರಿಗೆ ಶಾಸಕ ಹರೀಶ್ ಪೂಂಜರಿಂದ ಪರಿಹಾರ ಮೊತ್ತದ ಚೆಕ್ ವಿತರಣೆ

ಬೆಳ್ತಂಗಡಿ ಅರಣ್ಯ ಉಪವಿಭಾಗ ಹಾಗೂ ಉಪ್ಪಿನಂಗಡಿ ಅರಣ್ಯ ವಿಭಾಗದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಹಾಗೂ ಹಾನಿಗೊಳಗಾದ ಸಂತ್ರಸ್ಥರಿಗೆ ಶಾಸಕ ಹರೀಶ್ ಪೂಂಜ ಅವರು ಆ.15 ರಂದು ಬೆಳ್ತಂಗಡಿ ನಿರೀಕ್ಷಣಾ ಮಂದಿರದಲ್ಲಿ ಚೆಕ್ ಹಸ್ತಾಂತರಿಸಲಾಯಿತು.

ಕಳೆದ ಜುಲೈ ತಿಂಗಳಲ್ಲಿ ಕೊಕ್ಕಡದ ಸೌತಡ್ಕದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ, ಅವರ ಪತ್ನಿ ಸುಜಾತ ಅವರಿಗೆ 20 ಲಕ್ಷ ರೂ., ಬೆಳೆ ನಾಶ ಮಲವಂತಿಗೆ ಗ್ರಾಮದ ವಸಂತಿ ರೂ.81 ಸಾವಿರ, ಚಾರ್ಮಾಡಿ ಗ್ರಾಮದ ಕುಂಞ ಮಲೆಕುಡಿಯ ಅವರಿಗೆ 1.6, ಲಕ್ಷ ರೂ., ಧರ್ಮಸ್ಥಳ ಗ್ರಾಮದ ಬೋಳಿಯರು ಎಂಬಲ್ಲಿ ಆನೆ ದಾಳಿಯಿಂದ ಆಟೋ ರಿಕ್ಷಾ ನಜ್ಜುಗುಜ್ಜು ಗೊಂಡು ಹಾನಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಅವರಿಗೆ ರೂ.20 ಸಾವಿರ ವಿತರಿಸಲಾಯಿತು.

ಈ ವೇಳೆ ಪುತ್ತೂರು ಉಪ ವಿಭಾಗ ಎಸಿಎಫ್ ಸುಬ್ಬಯ್ಯ ನಾಯ್ಕ್, ಮಂಗಳೂರು ಉಪ ವಿಭಾಗ ಎಸಿಎಫ್ ಶಿವಾನಂದ್ ವಿಭೂತೆ, ಉಪ್ಪಿನಂಗಡಿ ಆರ್.ಎಫ್.ಒ ರಾಘವೇಂದ್ರ ಹಾಗೂ ಬೆಳ್ತಂಗಡಿ ಆರ್.ಎಫ್.ಒ. ತ್ಯಾಗರಾಜ್ ಟಿ.ಎನ್. ಉಪಸ್ಥಿತರಿದ್ದರು.

Related posts

ಉಜಿರೆ: ಹೆದ್ದಾರಿ ಬದಿ ಕೊಳಚೆ ನೀರು ಸಂಗ್ರಹ: ಸಾಂಕ್ರಾಮಿಕ ರೋಗದ ಭೀತಿ

Suddi Udaya

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಹೆಚ್.ಎಸ್ ಆಯ್ಕೆ

Suddi Udaya

ಬೆಳ್ತಂಗಡಿ: ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತು ಶಿಬಿರ

Suddi Udaya

ಗುರುವಾಯನಕೆರೆ ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ವಿಶ್ವ ಪರಿಸರ ದಿನ

Suddi Udaya

ಬೆಳ್ತಂಗಡಿ: ಮಹಿಳಾ ವೃಂದದಲ್ಲಿ ಝೇಂಕಾರ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ತುಳುನಾಡ್ ಜವಾನೆರ್ ವೇಣೂರು ಮತ್ತು ಗೋಳಿಯಂಗಡಿ ಕೇದಗೆ ಯುವಕೇಸರಿ ಫ್ರೆಂಡ್ಸ್ ಕ್ಲಬ್‌ನಿಂದ ಪುಸ್ತಕ ವಿತರಣೆ

Suddi Udaya
error: Content is protected !!