25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಇಳಂತಿಲ : ಈಶ್ವರಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಇಳಂತಿಲ : ಈಶ್ವರಿ ಸಂಜೀವಿನಿ ಮಹಿಳಾ ಒಕ್ಕೂಟ( ರಿ)ಇಳಂತಿಲ ಇದರ ವಾರ್ಷಿಕ ಮಹಾಸಭೆಯನ್ನು ನ.21 ರಂದು ಇಳಂತಿಲ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟನೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸವಿತಾ ನೆರವೇರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂಜೀವ ನಾಯ್ಕ್ ಪ್ರಾಸ್ತಾವಿಕ ಮಾತುಗಳನಾಡಿದರು. ಒಕ್ಕೂಟವು ಒಳ್ಳೆಯ ರೀತಿಯಲ್ಲಿ ಮುಂದುವರಿಯಲಿ ಎಂದು ಶುಭಹಾರೈಸಿದರು.

ರಾಜ್ಯ ಪ್ರಶಸ್ತಿ ಪಡೆದ Nrlm ಬ್ಲಾಕ್ ಮ್ಯಾನೇಜರ್ ನಿತೀಶ್ ರವರನ್ನು ಒಕ್ಕೂಟದ ಪರವಾಗಿ ಸನ್ಮಾನಿಸಲಾಯಿತು. Nrlm ಸಂಜೀವಿನಿ ಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ವೀಣಾ ಶ್ರೀ ಒಕ್ಕೂಟದ ಪದಾಧಿಕಾರಿಗಳ ಬದಲಾವಣೆ ಯನ್ನು ನೆರವೇರಿಸಿದರು. ಒಕ್ಕೂಟ ಅಧ್ಯಕ್ಷರು ನಮ್ಮ ಒಕ್ಕೂಟ ಲಾಭದಾಯಕ ರೀತಿಯಲ್ಲಿ ಸಾಗುತಿದೆ. ಅದೇ ರೀತಿ ಇನ್ನು ಮುಂದೆ ಯೂ ಮುಂದುವರಿಯಲಿ. ಸರಕಾರದ ಅನುದಾನಗಳನ್ನು ಸೂಕ್ತ ರೀತಿಯಲ್ಲಿ ಸದಸ್ಯರೆಲ್ಲರೂ ಬಳಸಿಕೊಂಡು. ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಎಂದು ಹಿತ ನುಡಿಗಳನ್ನಾಡಿದರು.

ಶ್ರೀಮತಿ ಶ್ರೀದೇವಿ ಮತ್ತು ಶ್ರೀಮತಿ ನಮಿತಾ ಪ್ರಾರ್ಥನೆ ಹಾಡಿದರು. ಎಮ್.ಬಿ.ಕೆ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಎಲ್.ಸಿ.ಆರ್ ಪಿ ಚೇತನಾ ಸ್ವಾಗತಿಸಿದರು. ಎಲ್.ಸಿ.ಆರ್ ಪಿ ಶಾಲಿನಿ ವರದಿ ಮಂಡನೆ ಮಾಡಿದರು. ಎಮ್.ಬಿ.ಕೆ ಪವಿತ್ರ ಜಮಾ ಖರ್ಚು ವಿವರ ಮಂಡಿಸಿದರು. ಸಂಘ ದ ಸದಸ್ಯೆ ಶ್ರೀಮತಿ ಅಕ್ಷತ ಧನ್ಯವಾದವಿತ್ತರು.

Related posts

ಅಂಡಿಂಜೆ: ಮಲೆರೊಟ್ಟು ನಿವಾಸಿ ಬಾಬು ಪೂಜಾರಿ ನಿಧನ

Suddi Udaya

ಕಲ್ಮಂಜ: ಅಕ್ಷಯ ನಗರದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಜ.27: ಸವಣಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 42ನೇ ವರ್ಷದ ಏಕಾಹ ಭಜನಾ

Suddi Udaya

ತಾಲೂಕಿನ ಹಲವು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಆಗಿ ಉನ್ನತೀಕರಿಸುವಂತೆ ಶಾಸಕ ಹರೀಶ್ ಪೂಂಜರಿಂದ ಮನವಿ

Suddi Udaya

ಪೆರಾಲ್ದರಕಟ್ಟೆ ಮಸ್ಜಿದ್‌ನಲ್ಲಿ ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಸಭೆ

Suddi Udaya

ಪುಂಜಾಲಕಟ್ಟೆ ಬಸವನಗುಡಿಯಲ್ಲಿ ಪಿವೈ ಟ್ರೇಡಿಂಗ್ ಟೈಲ್ಸ್,ಗ್ರಾನೈಟ್ ಹಾಗೂ ಸ್ಯಾನಿಟರಿ ಮಳಿಗೆ ಶುಭಾರಂಭ

Suddi Udaya
error: Content is protected !!