24.6 C
ಪುತ್ತೂರು, ಬೆಳ್ತಂಗಡಿ
May 18, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಮಹಿಳೆಯ ಮೊಬೈಲನ್ನು ಕದ್ದು, ಫೋನ್ ಪೇ ಮೂಲಕ ಹಣ ವಂಚನೆ: ತನ್ನ ಸ್ನೇಹಿತರಿಗೆ ಹಣ ಕಳುಸಿದ್ದ ಆರೋಪಿ ವಿರುದ್ಧ ಕೇಸ್ ದಾಖಲು

ಕುವೆಟ್ಟು: ಮಹಿಳೆಯೋರ್ವರ ಮೊಬೈಲನ್ನು ಕದ್ದ ವ್ಯಕ್ತಿ, ಅದೇ ಮೊಬೈಲ್ ಫೋನಿನಿಂದ ಫೋನ್ ಪೇ ಮೂಲಕ ಹಣ ಲಪಟಾಯಿಸಿದ ಘಟನೆ ನ.9ರಂದು ನಡೆದಿದೆ.

ಕುವೆಟ್ಟು ಗ್ರಾಮದ ಅಭಿದಾಬಾನು (35ವ)ರವರು ನ.9ರಂದು ಬೆಳಿಗ್ಗೆ ಮನೆಯಲ್ಲಿ ಇರದಿದ್ದ ವೇಳೆ, ಅವರ ಪರಿಚಯಸ್ಥರಾದ ಸಿದ್ಧಿಕ್ ಎಂಬಾತ ಅಂದಾಜು ರೂ.8000 ಮೌಲ್ಯದ ಮೊಬೈಲನ್ನು ಕದ್ದು, ಬಳಿಕ ಸದ್ರಿ ಮೊಬೈಲ್‌ನಲ್ಲಿ, ಪೋನ್‌ ಪೇ ಮುಖಾಂತರ ಅವರ ಖಾತೆಯಲ್ಲಿದ್ದ ರೂ 64.000/- ಹಣದ ಪೈಕಿ, ರೂ 34.000/- ರೂ ಹಣವನ್ನು ಜಾಪರ್‌ ಎಂಬಾತನಿಗೂ, ರೂ 25.000/- ಹಣವನ್ನು ಮಹಮ್ಮದ್‌ ಎಂಬಾತನಿಗೂ ಹಾಗೂ ರೂ 2000/- ಹಣವನ್ನು ಸಿರಾಜ್‌ ಎಂಬಾತನಿಗೂ ವರ್ಗಾವಣೆ ಮಾಡಿದ್ದಾನೆ. ಆರೋಪಿಗಳು ಅಭಿದಾಬಾನು ರವರ ಗಂಡನ ಸ್ನೇಹಿತರಾಗಿರುವುದರಿಂದ ಮೊಬೈಲ್‌ ಮತ್ತು ಹಣವನ್ನು ವಾಪಸು ನೀಡಬಹುದೆಂದು ಕಾದಿದ್ದು, ಈವರೆಗೆ ವಾಪಾಸ್ ನೀಡದಿರುವ ಹಿನ್ನೆಲೆಯಲ್ಲಿ ನ.23ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಠಾಣೆಯಲ್ಲಿ ಅಕ್ರ ನಂ 116/2023 ಕಲಂ; 380,411ಭಾ ದಂ ಸಂ ಪ್ರಕರಣ ದಾಖಲಿಸಿದ್ದಾರೆ.

Related posts

ಗುರುವಾಯನಕೆರೆ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.54.80 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

Suddi Udaya

ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ: ಬೈಕ್ ಸಹಿತ ರೂ. 76 ಸಾವಿರ ಮೌಲ್ಯದ ಮದ್ಯ ವಶ

Suddi Udaya

ಬಳಂಜ: ನಾಲ್ಕೂರು ನಿವಾಸಿ ಮನೋಹರ ಪೂಜಾರಿ ಸೇನೆಗೆ ಆಯ್ಕೆ

Suddi Udaya

ಮರೋಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ – ಗೋಮಾಂಸ ಮಾರಾಟಕ್ಕೆ ಯತ್ನಿಸಿದ ಅಜಿದ್ ಬಂಧನ

Suddi Udaya

ಗೇರುಕಟ್ಟೆ: ರೇಷ್ಮೆ ರೋಡ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ

Suddi Udaya

ಧರ್ಮಸ್ಥಳ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು

Suddi Udaya
error: Content is protected !!