September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಕಕ್ಕಿಂಜೆಯ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ ಪ್ರಕರಣ: ನಾಲ್ವರನ್ನು ಬಂಧಿಸಿದ ಧಮ೯ಸ್ಥಳ ಪೊಲೀಸರು

ಬೆಳ್ತಂಗಡಿ: ಕಕ್ಕಿಂಜೆಯ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಧಮ೯ಸ್ಥಳ ಪೊಲೀಸರು ಬಂಧಿಸಿದ್ದಾರೆ.

ಕಿನ್ನಿಗೋಳಿ ತಾಳಿಪ್ಪಡಿ ಗ್ರಾಮದ ಉಮಾ ಅಜಯ್ ಶೆಟ್ಟಿ (32ವ) ,ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಗಾಣದಬೆಟ್ಟು ಸೂರಜ್ ಶೆಟ್ಟಿ(23ವ), ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಮಂಜುನಾಥ ಪೂಜಾರಿ(30ವ), ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಪರೆಕಲ್ ನಿವಾಸಿಕಿಶೋರ್. ಟಿ (32ವ) ಬಂಧಿತರು.

ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿ ನವೆಂಬರ್ 9 ರಂದು ರಾತ್ರಿ 10 ಗಂಟೆ ಸಮಯಕ್ಕೆ ಇಸಾಕ್ ಎಂಬವರ ಅಕ್ಕನ ಮಗ ನೌಫಲ್ ಎಂಬವರು ತಮ್ಮ ಕಾರ್ ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ನೌಫಾಲ್ ನ ಗೆಳೆಯ ಸೈಪುದ್ದಿನ್ ಎಂಬಾತನ ಗೆಳೆಯರಾದ ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿಯವರು ಬಾಡಿಗೆಗೆ ನೀಡುವಂತೆ ಕೇಳಿದಾಗ ನೀಡದೇ ಇದ್ದುದ್ದರಿಂದ ಸದ್ರಿ ಕಾರನ್ನು ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ ಯವರು ಕಳವು ಮಾಡಿ ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ತಂಡ ನ.24 ರಂದು ಕಳ್ಳತನವಾದ ಇನೋವಾ ಕಾರು ಸಮೇತ ಪ್ರಕರಣದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಇದೀಗ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಿಷ್ಯಂತ್.ಸಿ.ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಂ.ಎನ್ ರವರ ನಿರ್ದೇಶನದಂತೆ ಬಂಟ್ವಾಳ ಡಿ.ವೈಎಸ್.ಪಿ ಪ್ರತಾಪ್ ಸಿಂಗ್ ಥೋರಾಟ್ ರವರ ಸೂಚನೆಯಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸೆಕ್ಟರ್ ಅನೀಲ್ ಕುಮಾರ್.ಡಿ ಮತ್ತು ಸಬ್ ಇಸ್ಪೆಕ್ಟರ್ ಸಮರ್ಥ ರವೀಂದ್ರ ಗಾಣಿಗೇರ ಹಾಗೂ ಸಿಬ್ಬಂದಿ ಎ.ಎಸ್.ಐ ಗಳಾದ ಸಾಮ್ಯುವೆಲ್ ಮತ್ತು ಪೌಲೋಸ್ ಹಾಗೂ ಸಿಬ್ಬಂದಿ ರಾಜೇಶ್.ಎನ್, ಪ್ರಶಾಂತ್, ಮಂಜುನಾಥ್, ಮಲ್ಲಿಕಾರ್ಜುನ್ ಎಂಬವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related posts

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಪಕ್ಕಳ ಭೇಟಿ

Suddi Udaya

ಬಿಜೆಪಿ ಮುಖಂಡ ತುಂಗಪ್ಪ ಬಂಗೇರರವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದ ಸಂಸದ ನಳಿನ್ ಕುಮಾರ್ ಕಟೀಲ್

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನೂತನ ನಾಯಕರ ಪದಗ್ರಹಣ ಮತ್ತು ಪ್ರಮಾಣವಚನ

Suddi Udaya

ಚಿಕ್ಕೋಡಿ ದಿಗಂಬರ ಜೈನ ಮುನಿ ಹತ್ಯೆ : ಬಂಗೇರ ಖಂಡನೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ, ಭಜನಾ ಸಂಕೀರ್ತನೆ ಉದ್ಘಾಟನೆ

Suddi Udaya

ಧರ್ಮಸಂರಕ್ಷಣಾ ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್ ಪಕ್ಕದಲ್ಲೇ ಸೌಹಾರ್ದಕ್ಕೆ ಬಾಧಕವಾಗುವಂತಹ ಬರವಣೆಗೆಗಳನ್ನು ಹೊಂದಿರುವ ಬ್ಯಾನರ್ ಅಳವಡಿಕೆ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲು

Suddi Udaya
error: Content is protected !!