32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಟೀಮ್ ದೇವರಗುಡ್ಡೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಅಂಗನವಾಡಿಗೆ ಚೇರ್ ವಿತರಣೆ

ಕಲ್ಮಂಜ: ಕಲ್ಮಂಜ ಗ್ರಾಮದ ಪಜಿರಡ್ಕ- ಮದ್ಮಲ್ ಕಟ್ಟೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ದಿನಾಚರಣೆ ಪ್ರಯುಕ್ತ ಟೀಮ್ ದೇವರಗುಡ್ಡೆ ವತಿಯಿಂದ ನ.25 ರಂದು ಕುರ್ಚಿ ವಿತರಣೆ ಮಾಡಿದರು.
15-20 ಮಕ್ಕಳು ಇರುವ ಅಂಗನವಾಡಿ ಕೇಂದ್ರ ಇದಾಗಿದ್ದು,ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಮತ್ತು ಮಳೆಗಾಲದಲ್ಲಿ ನೀರು ಸೋರುವ ಸ್ಥಿತಿ ಈ ಅಂಗನವಾಡಿ ಕೇಂದ್ರದ್ದಾಗಿದೆ.ಹಾಗೆಯೇ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡದ ಬೇಡಿಕೆ ಅನೇಕ ವರ್ಷಗಳಿಂದ ಕೇಳಿಬರುತ್ತಿದ್ದರು ಯಾವುದೇ ಸರಕಾರ ಈ ಕಡೆ ಗಮನ ಹರಿಸದಿರುವುದು ಬೇಸರದ ಸಂಗತಿ ಎಂಬುದು ಊರವರ ಅಭಿಪ್ರಾಯವಾಗಿದೆ.


ಹೆಚ್ಚಾಗಿ ಇಂಗ್ಲಿಷ್ ಶಿಕ್ಷಣಕ್ಕಾಗಿ ಮರುಹೋಗುತ್ತಿರುವ ಈ ಕಾಲಘಟ್ಟದಲ್ಲಿ ಅಂಗನವಾಡಿ ಕೇಂದ್ರಗಳನ್ನು ಉಳಿಸಿ ಬೆಳೆಸುವುದು ಸರಕಾರದ ಮತ್ತು ಊರವರ ಕರ್ತವ್ಯವಾಗಿದೆ.


ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ರೇಖಾ, ಆಶಾ ಕಾರ್ಯಕರ್ತೆ ವಿಜಯಾ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಸಹಾಯಕಿ ಶ್ರೀದೇವಿ, ಟೀಮ್ ದೇವರಗುಡ್ಡೆಯ ಹರೀಶ್ ಗೌಡ,ಸಚಿನ್ ಗೌಡ ಕಲ್ಮಂಜ, ಶಿವಪ್ರಸಾದ್, ಸಂಧ್ಯಾ, ಪುಷ್ಪವತಿ ಹಾಗೂ ಮಕ್ಕಳ ಪೋಷಕರು ಹಾಗೂ ಊರವರು ಪಾಲ್ಗೊಂಡಿದ್ದರು.

Related posts

ಸೆ.10: ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಮಕ್ಕಳಿಗೆ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

Suddi Udaya

ವಿಧಾನ ಸಭಾ ಚುನಾವಣೆ : ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿ.ಆರ್.ಪಿ. ಎಫ್ ಯೋಧರು ಹಾಗೂ ಬೆಳ್ತಂಗಡಿ ಠಾಣೆಯ ಪೊಲೀಸರ ಪಥ ಸಂಚಲನ

Suddi Udaya

ನಿಡ್ಲೆ :ಅಸ್ತಿ ಮಜ್ಜೆ ಶಸ್ತ್ರಚಿಕಿತ್ಸೆ ನೆರವು

Suddi Udaya

ಹಲವಾರು ಮೃತದೇಹ ಹೂತುಹಾಕಿದ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಮತ್ತೆ ಕಳೇಬರಕ್ಕಾಗಿ ಕಾರ್ಯಾಚರಣೆ ಆರಂಭ

Suddi Udaya

ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನಲ್ಲಿ ʼಎಮ್ಯುಲೇಶನ್‌ʼ ಕಾರ್ಯಕ್ರಮ

Suddi Udaya

ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

Suddi Udaya
error: Content is protected !!