April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಳೆಂಜ ಅಂಗಡಿಯಲ್ಲಿ ಅಕ್ರಮ ಮದ್ಯ ಸಂಗ್ರಹ ಮಾಡಿದ ಆರೋಪ: ಅಂಗಡಿ ಮಾಲಕನ್ನು ದೋಷಯುಕ್ತಗೊಳಿಸಿ ನ್ಯಾಯಾಲಯ ಆದೇಶ

ಕಳೆಂಜ : ಅಂಗಡಿಯಲ್ಲಿ ಅಕ್ರಮ ಮದ್ಯ ಸಂಗ್ರಹ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲಕನ್ನು ದೋಷಯುಕ್ತಗೊಳಿಸಿ ಬೆಳ್ತಂಗಡಿ ನ್ಯಾಯಾಲಯ ತೀರ್ಪು ನೀಡಿದೆ.

ಕಳೆಂಜ ಗ್ರಾಮದ ಡಾ| ಟಿ.ವಿ.ಜೋಸೆಫ್ ಎಂಬವರ ಮಾಲಕತ್ವದ ಅಂಗಡಿಯನ್ನು ಬಾಡಿಗೆ ನೆಲೆಯಲ್ಲಿ ಪಡೆದಿದ್ದ ವ್ಯಕ್ತಿ ಸದ್ರಿ ಅಂಗಡಿ ಕೋಣೆಯಲ್ಲಿ ಅಕ್ರಮ ಮದ್ಯ ಸಂಗ್ರಹಣೆ ಮಾಡಿದ ಬಗ್ಗೆ ಮಾಹಿತಿ ಪಡೆದ ಅಬಕಾರಿ ಇಲಾಖೆಯವರು ದಾಳಿ ಮಾಡಿ, ತನಿಖೆ ನಡೆಸಿ, ಬೆಳ್ತಂಗಡಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ನ್ಯಾಯಾಲಯವು ವಿಚಾರಣೆ ನಡೆಸಿ ನ್ಯಾಯಾಧೀಶ ರಾದ ಸಂದೇಶ್ ಕೆ. ಇವರು ಅಂಗಡಿ ಮಾಲೀಕ ಡಾ। ಟಿ.ವಿ.ಜೋಸೆಫ್ ಇವರನ್ನು ದೋಷ ಮುಕ್ತಗೊಳಿಸಿ ಆದೇಶ ನೀಡಿದ್ದಾರೆ. ಆರೋಪಿಯ ಪರ ವಕೀಲರಾದ ಗಣೇಶ ಗೌಡ ಇವರು ವಾದಿಸಿದ್ದರು.

Related posts

ಮಚ್ಚಿನ ಸಂಪರ್ಕ ರಸ್ತೆಯ ಪಯ್ಯೊಟ್ಟು ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಬೆಳಾಲು: ರೈತರ ಸದಸ್ಯತ್ವ ನೋಂದಾವಣೆ ಮತ್ತು ರೈತರಿಗೆ ಮಾಹಿತಿ ಕಾರ್ಯಕ್ರಮ

Suddi Udaya

ಮೇ. 13 ವಿಧಾನಸಭಾ ಚುನಾವಣಾ ಮತ ಎಣಿಕೆ: ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

Suddi Udaya

ಮದ್ದಡ್ಕ ಪಡ್ಡೆಲು ನಿವಾಸಿ ಶೀಲಾವತಿ ನಿಧನ

Suddi Udaya

ನಾಲ್ಕೂರು ಇಕೋ ಫಾರ್ಮ್ ನಲ್ಲಿ ಪುರಾತನ ಕಾಲದ ನಾಗ ಕಲ್ಲುಗಳು ಪತ್ತೆ

Suddi Udaya
error: Content is protected !!