ಬೆಳ್ತಂಗಡಿ : ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಮಹೋತ್ಸವದ ಅಂಗವಾಗಿ ನ.26 ರಂದು ಧರ್ಮ ಪ್ರಾಂತಿಯ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು. ಉಡುಪಿ ದಕ್ಷಿಣ ಕನ್ನಡ ಕೊಡಗು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸುಮಾರು ವಿವಿಧ ಚರ್ಚ್ ಗಳ ಸುಮಾರು 42 ತಂಡಗಳು ಹಗ್ಗಜಗ್ಗಾಟ ಮತ್ತು ವಾಲಿಬಾಲ್ ಪಂದ್ಯಾಟಗಳಲ್ಲಿ ಭಾಗವಹಿಸಿದರು.
ಸಭಾ ಕಾರ್ಯಕ್ರಮದಲ್ಲಿ ಧರ್ಮಾಧ್ಯಕ್ಷರ ಅನುಪಸ್ಥಿತಿಯಲ್ಲಿ ವಿಕಾರ್ ಜೆನೆರಲ್ ಅತಿ ವಂದನಿಯ ಫಾ. ಜೋಸ್ ವಲಿಯಪರಂಬಿಲ್ ಅಧ್ಯಕ್ಷತೆ ವಹಿಸಿದ್ದರು. ವಂದನಿಯ ಫಾ. ಸಣ್ಣಿ ಆಲಪ್ಪಾತಟ್ಟ್ ಫಾ. ಸೇಬಾಷ್ಟಿಯನ್ ಚೇಲಕ್ಕಾ ಪಳ್ಳಿ, ಕೆ ಎಸ್ ಎಂ ಸಿ ಎ ಅಧ್ಯಕ್ಷ ಬಿಟ್ಟಿ ನೆಡುನಿಲಂ, ಯುವ ವಿಭಾಗದ ರೋಬಿನ್ ಒಡ೦ಪಲ್ಲಿ, ಪ್ರದಾನ ಕಾರ್ಯದರ್ಶಿ ಸೇಬಾಷ್ಟಿಯನ್ ಎಂ ಜೆ, ಪ್ರಶಾಂತ್ ಲಾರೆನ್ಸ್ ಚಿರಮೆಲ್, ಸಹನಶ್ರೀ ಬ್ಯಾಂಕ್ ನ ರಾಜೇಶ್ ಪುದುಶೇರಿ, ಹರ್ಡಲ್ಸ್ ರಾಷ್ಟ್ರೀಯ ದಾಖಲೆಗಾರ ಹಾಗೂ ಭಾರತೀಯ ರೈಲ್ವೆ ಯ ಶ್ರೀ ಯೇಸುದಾಸ್ ಪುದುಮನ ಕರ್ನಾಟಕ ಪೊಲೀಸ್ ನ ಜೋರ್ಜ್ ವರ್ಗೀಸ್ ಪಾಲೇಲಿ ಮೊದಲಾದವರು ಉಪಸ್ಥಿತರಿದ್ದರು.
ಹಗ್ಗಜಗ್ಗಾಟದ ಪ್ರಶಸ್ತಿ ಸುತ್ತಿನಲ್ಲಿ ಬಲಿಷ್ಠ ಮುದೂರು ಸೆಂಟ್ ಮೇರಿಸ್ ತಂಡವು ಕಾಯರ್ತಡ್ಕ ಸೆಂಟ್ ಸೆಬಾಷ್ಟಿಯನ್ ತಂಡವನ್ನು ನೇರ ಸೆಟ್ ಗಳಿಂದ ಮಣಿಸಿ ಪ್ರಶಸ್ತಿ ಪಡೆದುಕೊಂಡಿತು. ತೃತೀಯ ಸ್ಥಾನ ಬಟ್ಟಿಯಾಲ್ ತಂಡ ಪಡೆದುಕೊಂಡಿತು. ಮಹಿಳಾ ವಿಭಾಗದಲ್ಲಿ ತೋಟತ್ತಾಡಿ ಪ್ರಥಮ, ಬಟ್ಟಿಯಾಲ್ ದ್ವಿತೀಯ ಹಾಗೂ ಕೊಡಗಿನ ಸೆಂಟ್ ಜೂಡ್ ಹೆಗ್ಗಳ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ವಾಲಿಬಾಲ್ ಪಂದ್ಯಾಟದಲ್ಲಿ ಸೆಂಟ್ ಆಂಟಿನಿ ತೋಟತ್ತಾಡಿ ಪ್ರಥಮ, ಸೆಂಟ್ ತೋಮಸ್ ಬಜಗೋಳಿ ದ್ವಿತೀಯ ಸೆಂಟ್ ಸೆಬಾಷ್ಟಿಯನ್ ಕಾಯರ್ತಡ್ಕ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಕ್ರೀಡಾ ಸಂಯೋಜಕರು,ಕೆ ಎಸ್ ಎಂ ಸಿ ನಿರ್ದೇಶಕರು, ಸಂತ ಅಲ್ಫೋನ್ಸ ಚರ್ಚ್ ನ ಧರ್ಮ ಗುರುಗಳು ಆಗಿರುವ ವಂದನಿಯ ಫಾ. ಶಾಜಿ ಮಾತ್ಯು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಸಣ್ಣಿ ಮುಟ್ಟತ್, ಶ್ರೀಜೆಲ್ಸ್, ಅಭಿಲಾಷ್ ವಾಳೂ ಕಾರನ್, ಜೈಸನ್ ಪಟ್ಟೇರಿ ಕೆ ಎಸ್ ಎಂ ಸಿ ಎ ಧರ್ಮಸ್ಥಳ ಫೋರೋನ ಅಧ್ಯಕ್ಷರು. ಸಿಸ್ಟೆರ್ ಶರಿನ್ ಎಸ್ ಎ ಬಿ ಎಸ್, ಜೋಬಿನ್ ನೆಲ್ಯಾಡಿ, ನವೀನ್ ಜೋಸೆಫ್ ನೆಲ್ಯಾಡಿ ಮೊದಲಾದವರು ಸಹಕರಿಸಿದರು.