24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಶ್ರೀ ಗುರುದೇವ ಕಾಲೇಜಿನ ಕ್ರೀಡಾಕೂಟ ಉದ್ಘಾಟನೆ

ಬೆಳ್ತಂಗಡಿ : ‘ ಕ್ರೀಡಾಕೂಟ ಆರೋಗ್ಯ ವರ್ಧಕ. ಕ್ರೀಡೆಯನ್ನು ಬದುಕಿನ ಭಾಗವಾಗಿಸಿಕೊಂಡರೆ ನಮ್ಮ ಬದುಕಿನ ಕೊನೆಯವರೆಗೆ ಆರೋಗ್ಯ ನೀಡುತ್ತದೆ’ ಎಂದು ವಕೀಲ ಸುದರ್ಶನ್ ರಾವ್ ಗಜಂತೋಡಿ ಹೇಳಿದರು.

ಅವರು ನ.28ರಂದು ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.

‘ಯಾವುದೇ ಕ್ರೀಡೆಯನ್ನು ನಿರ್ಲಕ್ಷಿಸಬಾರದು. ಕೇವಲ ಕ್ರಿಕೆಟ್ ಮಾತ್ರ ಅಲ್ಲದೆ ಬೇರೆ ಎಲ್ಲಾ ಕ್ರೀಡೆಗಳ ಜೊತೆ ಭಾಗವಹಿಸಬೇಕು’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ವಸಂತ ಬಂಗೇರ ಮಾತನಾಡಿ, ‘ ಕ್ರೀಡೆಯಲ್ಲಿ ಭಾಗವಹಿಸುವ ಮನಸ್ಸನ್ನು ಎಲ್ಲಾ ವಿದ್ಯಾರ್ಥಿಗಳು ಹೊಂದಬೇಕು. ಕ್ರೀಡಾ ಸ್ಫೂರ್ತಿಯಿಂದ ಪ್ರೋತ್ಸಾಹಿಸಬೇಕು’ ಎಂದರು.

ವೇದಿಕೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿರಾಮ್ ಶೆಟ್ಟಿ ಇದ್ದರು.

ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕಾವ್ಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಪ್ರಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಮೀವುಲ್ಲಾ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಪರಿಚಯಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ಹಾಗೂ ಗಣಕ ವಿಜ್ಞಾನ ಉಪನ್ಯಾಸಕಿ ಶುಭಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Related posts

ಬೈಪಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾ ಮಹೋತ್ಸವ

Suddi Udaya

ಶಿರ್ಲಾಲು ಶಾಲಾ ಹಳೆವಿದ್ಯಾರ್ಥಿ ಸಂಘದಿಂದ ಆರ್ಥಿಕ ನೆರವು

Suddi Udaya

ಲಯನ್ಸ್ ಕ್ಲಬ್ ವತಿಯಿಂದ ಸುಲ್ಕೇರಿ ಕೋಲ್ಯಾಯದಲ್ಲಿ ನದಿಯ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಕಸಕಡ್ಡಿಗಳ ತೆರವು ಕಾರ್ಯ

Suddi Udaya

ಮುಂಡಾಜೆ ಸೀಟು ಬಳಿಯ ಸಿಸಿ ಕ್ಯಾಮೆರಾ ಎಗರಿಸಿದ ಕಳ್ಳರು

Suddi Udaya

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರಿಗೆ ಮೊಹರೆ ಹನುಮಂತರಾಯ ಪ್ರಶಸ್ತಿ

Suddi Udaya

ರೆಂಕೆದಗುತ್ತು ನಿವಾಸಿ ಜನಾರ್ಧನ ನಿಧನ

Suddi Udaya
error: Content is protected !!