28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಣ್ಣೀರುಪಂತ: ಲಕ್ಷದೀಪೋತ್ಸವ ಪಾದಯಾತ್ರೆಯ ಪೂರ್ವಭಾವಿ ಸಭೆ

ತಣ್ಣೀರುಪಂತ : ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ನಡೆಯಲಿರುವ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ತಣ್ಣೀರುಪಂತ ಹಾಲು ಉತ್ಪಾದಕ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಈ ಸಭೆಯು ತಣ್ಣೀರುಪಂತ ವಲಯದ ಜನಜಾಗೃತಿ ವಲಯಧ್ಯಕ್ಷರಾದ ಪ್ರಭಾಕರ ಗೌಡ ಪೊಸಂದೋಡಿ ರವರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು .

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ರವರು 11 ನೇ ವರ್ಷದ ಪಾದಯಾತ್ರೆ ಯ ಬಗ್ಗೆ ಮಾತನಾಡುತ್ತಾ ಭಕ್ತಿಯಿಂದ ಎಲ್ಲಾ ಭಕ್ತಾದಿಗಳು ಪಾದಯಾತ್ರೆಗೆ ಭಾಗವಹಿಸಬೇಕು ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಪೋಲಿಸ್ ಅಧಿಕಾರಿಯವರಾದ ಸುದರ್ಶನ್ ಕೊಲ್ಲಿ ರವರು ಪಾದಯಾತ್ರೆ ಶ್ರದ್ದೆ ಭಕ್ತಿಯಿಂದ ತಾವೆಲ್ಲರೂ ಭಾಗವಹಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು .

ವೇದಿಕೆಯಲ್ಲಿ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿಯವರಾದ ದಯಾನಂದ ಪೂಜಾರಿ ರವರು, ಪ್ರಗತಿಬಂದು ಸ್ವ ಸಹಾಯ ಸಂಘದ ವಲಯದ ಅಧ್ಯಕ್ಷರಾದ ರಾಮಣ್ಣಗೌಡ, ಜನಜಾಗೃತಿ ವೇದಿಕೆಯ ತಾಲೂಕು ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಗುಣಕರ ಅಗ್ನಾಡಿ ರವರು ಉಪಸ್ಥಿತರಿದ್ದರು .ಹಾಗೂ ವಲಯದ ಗಣ್ಯರು, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಜನಜಾಗೃತಿ ವೇದಿಕೆಯ ಕಾರ್ಯಕಾರಿಣಿ ಸದಸ್ಯರುಗಳು, ಒಕ್ಕೂಟ ಅಧ್ಯಕ್ಷಪದಾಧಿಕಾರಿಗಳು, ಭಜನಾ ಮಂಡಳಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು, ವಿಪತ್ತು ನಿರ್ವಹಣೆಯ ಸ್ವಯಂ ಸೇವಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಭೆಯನ್ನು ತಣ್ಣೀರುಪಂತ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿದ್ಯಾ,ರವರು ಸ್ವಾಗತಿಸಿ, ಸೇವಾಪ್ರತಿನಿಧಿಯವರಾದ ಶಿವರಾಮ್ ನಿರೂಪಿಸಿ, ಜನಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷ ರಾಜಶೇಖರ್ ವಂದಿಸಿದರು.

Related posts

ಉಚಿತ ಬಿದಿರು ಸಸಿಗಳ ವಿತರಣೆ; ಅರ್ಜಿ ಆಹ್ವಾನ

Suddi Udaya

ಫೆ.27-29: ಶಿಬಾಜೆ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾಗಿ ಇಸುಬು ಯು.ಕೆ ನೇಮಕ

Suddi Udaya

ಮೇ 19: ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya

ಕಕ್ಕಿಂಜೆ : ಕೃಷಿಕ ಗೋಕುಲ್ ದಾಸ್ ಭಟ್ ನಿಧನ

Suddi Udaya

ಬಹುಜನ ನೇತಾರ ಪಿ. ಡೀಕಯ್ಯರವರ ಬದುಕು -ಹೋರಾಟಗಳ ಸಂಸ್ಮರಣಾ ಕಾರ್ಯಕ್ರಮ

Suddi Udaya
error: Content is protected !!