ಬೆಳ್ತಂಗಡಿ: ರಾಜ್ಯ ಸರಕಾರದ ಫ್ರುಟ್ಸ್ ಐ.ಡಿ. ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಮನವಿ ಮಾಡಿದ್ದಾರೆ. ನ. 29ರಂದು ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರದ ಫ್ರುಟ್ಸ್ ಐ.ಡಿ. ಮಾಡಿಸಿಕೊಳ್ಳಬೇಕು. ಈ ಯೋಜನೆಯ ಫಲವನ್ನು ಎಲ್ಲ ರೈತರು ಪಡೆದುಕೊಳ್ಳಬಹುದು. ರೈತರು ಆಧಾರ್ ಲಿಂಕ್ ಮಾಡಿ ನೋಂದವಣಿ ಮಾಡಿಸಿಕೊಳ್ಳಬಹುದು. ಎಲ್ಲಾ ರೈತರು ಫ್ರುಟ್ಸ್ ಐಡಿ ಮಾಡಿಸುವುದರಿಂದ ಪ್ರಕೃತಿಕ ವಿಕೋಪದಿಂದ ಬೆಳೆನಾಶದಲ್ಲಿ ಈ ಯೋಜನೆಯ ಮೂಲಕ ನಿಮ್ಮ ಖಾತೆಗೆ ಹಣ ಜಮಾವಾಗುತ್ತದೆ. ನಿರ್ದಿಷ್ಟ ಎಕರೆಗೆ ಈ ಯೋಜನೆ ಸೀಮಿತವಾಗುವುದಿಲ್ಲ.
ತಮ್ಮ ಐಡಿಯನ್ನು ದಾಖಲಿಸಲು ಗ್ರಾಮ ಲೆಕ್ಕಾಧಿಕಾರಿ, ತೋಟಾಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿಸಬಹುದು. ಐಡಿ ಮಾಡಲು ಆಧಾರ್‌ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಅವ್ಯಶಕತೆಯಿದೆ ಎಂದರು.
ಲೋಕಸಭೆ ಚುನವಾಣೆ ಬರುತ್ತಿದೆ 18 ವರ್ಷವಾದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬೇಕು. ನೋಂದಾವಣೆ ಮಾಡಲು 1/4/2024 ಕೊನೆಯ ದಿನಾಂಕವಾಗಿದ್ದು ಹತ್ತಿರದ ಬಿಎಲ್‌ಓ, ಕಾಲೇಜಿನಲ್ಲಿ ಅಥವಾ ತಾಲೂಕು ಕಚೇರಿಯ ಚುನಾವಣಾ ಕೇಂದ್ರದಲ್ಲಿ ದಾಖಲೆ ಸಲ್ಲಿಸಬಹುದು. ಕಡತ ವಿಲೇವಾರಿಗಳು ತಡೆಯಾಗುವುದನ್ನು ತಪ್ಪಿಸಲು ಇ ಆಫೀಸ್ ತೆರದಿದೆ. ಅಧಿಕಾರಿಗಳು ಕಂಪ್ಯೂಟರ್ ನಲ್ಲಿ ಇದನ್ನು ಅವಳಡಿಸಿದ್ದು ಯಾವ ಅಧಿಕಾರಿಗಳ ಬಳಿ ಎಷ್ಟು ಕಡತಗಳು ಬಾಕಿವೆ ಎಂದು ತಿಳಿಯುತ್ತದೆ. ತಿಂಗಳಿಗೆ ಒಮ್ಮೆ ಎಷ್ಟು ಕಡತಗಳು ಬಾಕಿವೆ ಎಂದು ನೋಡಲಾಗುತ್ತದೆ. ಕಡತವನ್ನು ಸಲ್ಲಿಸುವವರು ಅಧಿಕಾರಿಗಳಿಂದ ಇ ಆಫೀಸ್ ನಂಬ್ರವನ್ನು ಪಡೆದುಕೊಂಡು ಹೋಗಬೇಕು ಎಂದು ತಹಶೀಲ್ದಾರ್ ಪ್ರಥ್ವಿ ಸಾನಿಕಂ ಹೇಳಿದರು.