September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಶಿಶಿಲ: ‘ವೇದ ಕುಸುಮ’ ಶಿಬಿರ ಸಂಪನ್ನ

ಶಿಶಿಲ: ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ದಭೆ೯ತಡ್ಕ ಇದರ ಚಿತ್ಪಾವನ ಸಭಾ ಸಭಾಭವನದಲ್ಲಿ ಮೇ3ರಿಂದ ನಡೆಯುತ್ತಿದ್ದ ‘ವೇದ ಕುಸುಮ’ಶಿಬಿರವು ಮೇ 12ರಂದು ಸಂಪನ್ನಗೊಂಡಿತು.

ಶಿಶಿಲ ಸೀಮಾ ಚಿತ್ಪಾವನ ಸಮಾಜ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಶಿಬಿರದಲ್ಲಿ ಬೆಂಗಳೂರು, ಕಾಕ೯ಳ, ಬೆಳ್ತಂಗಡಿ, ಪುತ್ತೂರು ತಾಲೂಕಿನಿಂದ ಸಮಾಜದ 20 ಮಂದಿ ಭಾಗವಹಿಸಿದ್ದರು. ಶಿಬಿರದಲ್ಲಿ ಸಂಧ್ಯಾವಂದನೆ, ಅಥವ೯ಶೀಷ೯, ಗಣಪತಿ ಸೂಕ್ತ,ಶ್ಲೋಕಗಳು, ಪುರುಷ ಸೂಕ್ತಗಳನ್ನು ಕಲಿಸಲಾಯಿತು.

ಉಚಿತವಾಗಿ ನಡೆಸುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶ್ರೀವರದ ಶಂಕರ ದಾಮಲೆ ಸ್ವಾಗತಿಸಿದರು. ಗುರುಗಳಾದ ಶ್ರೀಗೋಪಾಲ ಮರಾಠೆ, ಶ್ರೇಯಸ್ ಪಾಳಂದೆ , ಅಶೋಕ ಗೋಗಟೆಯವರಿಗೆ ಗುರು ದಕ್ಷಿಣೆಯನ್ನು ಶಿಬಿರಾಥಿ೯ಗಳು ನೀಡಿ ಗೌರವಿಸಿದರು.

ಶಂಕರ ವೇದ ಪಾಠಶಾಲೆಯ ಅಂಶುಮಾನ ಅಭ್ಯಂಕಾರ್ ಸಮಯೋಚಿತವಾಗಿ ಮಾತನಾಡಿದರು. ಉದಯ ಕುಮಾರ ಅಭ್ಯಂಕಾರರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಕ್ರಮವನ್ನು ಯೋಗೀಶ ದಾಮಲೆ ನಿರೂಪಿಸಿ ವಂದಿಸಿದರು. ಶಿಬಿರಾಥಿ೯ಯವರ ಹೆತ್ತವರು ಉಪಸ್ಥಿತರಿದ್ದರು.

Related posts

ಡಾ|| ಹೇಮಾವತಿ ವೀ. ಹೆಗ್ಗಡೆಯವರ ಹುಟ್ಟುಹಬ್ಬ: ತಣ್ಣೀರುಪಂತ ವಲಯದ ಮಾಶಾಸನ ಪಡೆಯುವ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಂತರಾಷ್ಟ್ರೀಯ ಆರೋಗ್ಯ ದಿನದ ಆಚರಣೆ

Suddi Udaya

ನಾರಾವಿ ಸಂತ ಅಂತೋನಿ ಕಾಲೇಜಿನಲ್ಲಿ ಸಂಭ್ರಮ 2025

Suddi Udaya

ಕುವೆಟ್ಟು ಸ.ಉ.ಹಿ. ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಧರ್ಮಸ್ಥಳ: ಕಟ್ಟದಬೈಲು ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

Suddi Udaya
error: Content is protected !!