24.5 C
ಪುತ್ತೂರು, ಬೆಳ್ತಂಗಡಿ
April 5, 2025
ಅಪರಾಧ ಸುದ್ದಿ

ಪ್ರಾಥಮಿಕ ಶಾಲೆಯ ಬಾಲಕನ ಸೈಕಲನ್ನು ಮಾರಾಟ ಮಾಡಿದ ವಿಚಾರ:ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಂದಹಲ್ಲೆ ಆರೋಪ – ಬಾಲಕ ಆಸ್ಪತ್ರೆಗೆ ದಾಖಲು-ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿರುವ
ಬಾಲಕ ಆತನ ಸೈಕಲನ್ನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂದಿಸಿದಂತೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಲ್ಲೆ ನಡೆಸಿರುವುದಾಗಿ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.28 ರಂದು ಬೆಳಿಗ್ಗೆ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಪರಮೇಶ ಎಂಬವರು ಬಾಲಕನನ್ನು ವಿಚಾರಿಸಿ ಬಾಲಕನ ತಾಯಿಯ ಸಮಕ್ಷಮದಲ್ಲಿ ಬಾಲಕನಿಗೆ ಸಣ್ಣ ದೊಣ್ಣೆಯಿಂದ ಹಾಗೂ ಕೈಯಿಂದ ಹೊಡೆದಿರುತ್ತಾರೆ. ಈ ವೇಳೆ ಶಾಲಾ ಶಿಕ್ಷಕರಿಬ್ಬರು ಬಾಲಕನಿಗೆ ಹೊಡೆಯಲು ಪ್ರೇರೇಪಿಸಿರುತ್ತಾರೆ. ಹಲ್ಲೆ ನಡೆಸಿದ ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೇ ಸೈಕಲ್ ಕದ್ದು ಮಾರಾಟ ಮಾಡಿದ ಬಗ್ಗೆ ಕೇಸು ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ಬಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
‌‌ಶಾಲೆಯಲ್ಲಿ ನಡೆದ ಹಲ್ಲೆಯಿಂದ ನ. 30 ರಂದು ಬೆಳಿಗ್ಗೆ ಬಾಲಕನಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿರುತ್ತಾರೆ ಎಂಬುದಾಗಿ ಸಂತ್ರಸ್ಥ ಬಾಲಕನು ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಕಲಂ: 323,324,506,114 ಜೊತೆಗೆ 34 ಐಪಿಸಿ ಮತ್ತು ಕಲಂ:75 ಬಾಲನ್ಯಾಯ ಕಾಯಿದೆ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮೆಣಸಿನ ವ್ಯಾಪಾರಿಯ ಬೈಕ್ ಕಳವು

Suddi Udaya

ಕೋಳಿ ತ್ಯಾಜ್ಯದಿಂದ ಅಶುದ್ಧಿಯಾಗುತ್ತಿರುವ ಶಿಶಿಲದ‌ ” ಕಪಿಲೆ”

Suddi Udaya

ಇಳಂತಿಲ: ವಿದ್ಯುತ್ ಅವಘಡದಿಂದ ಯುವಕ ಸಾವು

Suddi Udaya

ಕಡಿರುದ್ಯಾವರ ಎಮಾ೯ಲ್ ಪಲ್ಕೆಯಲ್ಲಿ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದು ಮೃತಪಟ್ಟ ಬೆಳಗಾವಿ ನಿವಾಸಿ ಪ್ರವೀಣ್ ಎಂಬವರ ವಾರಿಸುದಾರರ ಪತ್ತೆಗೆ ಪೊಲೀಸರ ಮನವಿ

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಣಿಜರಿ ಪರಿಸರದಲ್ಲಿ ಬೆಂಕಿ

Suddi Udaya

ಆಟೋ ಚಾಲಕನಿಗೆ ಅಪರಿಚಿತ ತಂಡದಿಂದ ಹಲ್ಲೆ: ಠಾಣೆಗೆ ದೂರು

Suddi Udaya
error: Content is protected !!