24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ನವಶಕ್ತಿ ಆಯ್ಕೆ

ಪಡಂಗಡಿ : ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಬ್ರಹ್ಮ ಕಲಶೋತ್ಸವ ಸಮಿತಿ ರಚನಾ ಸಭೆಯು ಡಿ 01 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ವಹಿಸಿದ್ದರು.‌ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಯಾವ ರೀತಿಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಕೊಡುಗೈದಾನಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ , ಕಾರ್ಯಾಧ್ಯಕ್ಷರಾಗಿ ಸಂತೋಷ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ಇಡ್ಯಾ, ಉಪಾಧ್ಯಕ್ಷರುಗಳಾಗಿ ಪ್ರಭಾಕರ ಬಂಗೇರ, ಶ್ರೀಕಾಂತ್ ಶೆಟ್ಟಿ ಮುಂಡಾಡಿ, ನಾರಾಯಣ ಮೂಲ್ಯ, ಅಜಿತ್ ಶೆಟ್ಟಿ ಕೊರ್ಯರ್, ಕಾರ್ಯದರ್ಶಿಗಳಾಗಿ ಸಂತೋಷ್ ಹಲ್ಲಂದಡಿ, ಶಶಿರಾಜ್ ಶೆಟ್ಟಿ, ಧನಲಕ್ಷ್ಮಿ, ಆನಂದ ಶೆಟ್ಟಿ ಐಸಿರಿ, ಕೋಶಾಧಿಕಾರಿ ವಸಂತ ಗೌಡ, ಜತೆ ಕಾರ್ಯದರ್ಶಿ ಲೀಲಾವತಿ ಸೋಣಂದೂರು ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ತಂತ್ರಿಗಳಾದ ಉದಯ ಪಾಂಗಣ್ಣಾಯ, ಮಾಜಿ ಶಾಸಕ ಪ್ರಭಾಕರ ಬಂಗೇರ, ಗೋಪಾಲ ಶೆಟ್ಟಿ ಕೊರ್ಯರ್, ಸುಕೇಶ್ ಕಡಂಬು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಉಪ್ಪಡ್ಕ ಉಪಸ್ಥಿತರಿದ್ದರು.

ಚಿದಾನಂದ ಇಡ್ಯಾ ಕಾರ್ಯಕ್ರಮ ನಿರೂಪಿಸಿ, ಶಾಂತಾ ಜೆ ಬಂಗೇರ ಧನ್ಯವಾದವಿತ್ತರು.

Related posts

ಮುಂಡಾಜೆ ಗ್ರಾ.ಪಂ. ನಲ್ಲಿ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲಭೂತ ದಾಖಲೆಗಳ ನೋಂದಣಿ ಮಹಾ ಅಭಿಯಾನ

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಮುಂಡಾಜೆ ಚಿತ್ಪಾವನ ಸಂಘಟನೆ ವಾರ್ಷಿಕೋತ್ಸವ

Suddi Udaya

ಮುಂಡಾಜೆ: ಕಾನೂನು ಅರಿವು ಕಾರ್ಯಕ್ರಮ

Suddi Udaya

ಮಚ್ಚಿನ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!