ಡಿ.3: ಬಂಟರಯಾನೆ ನಾಡವರ ಸಂಘ ಬೆಳ್ತಂಗಡಿ ಆಶ್ರಯದಲ್ಲಿ ಬಂಟೋತ್ಸವ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಬಂಟರಯಾನೆ ನಾಡವರ ಸಂಘ ಬೆಳ್ತಂಗಡಿ, ಬಂಟರ ಭವನ, ಗುರುವಾಯನಕೆರೆ, ಮತ್ತು
ತಾಲೂಕು ಮಹಿಳಾ ವಿಭಾಗ ಹಾಗೂ ತಾಲೂಕು ಯುವ ಬಂಟರ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ
ಬಂಟೋತ್ಸವ 2023 ಕಾರ್ಯಕ್ರಮವು ಡಿ.3 ರಂದು ಬಂಟರ ಭವನ ಗುರುವಾಯನಕೆರೆಯಲ್ಲಿ ನಡೆಯಲಿದೆ.

ಕಾರ್ಯಕ್ರಮ ಉದ್ಘಾಟನೆಯನ್ನು ಹೇರಾಂಭ ಇಂಡಸ್ಟ್ರೀಸ್ ಮುಂಬಯಿ ಇದರ ಸಿ.ಎಂ.ಡಿ ಸದಾಶಿವ ಶೆಟ್ಟಿ ಕನ್ಯಾನ ನೆರವೇರಿಸಲಿದ್ದಾರೆ. ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಮಂಗಳೂರಿನ ಶ್ರೀದೇವಿ ಎಜುಕೇಶನಲ್ ಟ್ರಸ್ಟ್‌ನ ಎ. ಸದಾನಂದ ಶೆಟ್ಟಿ, ಬೆಂಗಳೂರು ಎಂ.ಆರ್.ಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ, ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ, ಮಾಲಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಅಧ್ಯಕ್ಷ ಡಾ. ಮೋಹನ್ ಆಳ್ವ, ಆರ್ಗಾನಿಕ್ ಗ್ರೂಪ್ಸ್ ಆಫ್ ಇಂಡಸ್ರ್ಟೀಸ್, ಮುಂಬಯಿ ಇದರ ಸಿ.ಎಂ.ಡಿ ತೋನ್ಸೆ ಆನಂದ ಎಂ ಶೆಟ್ಟಿ, ವಿ.ಕೆ ಗ್ರೂಪ್ಸ್ ಆಫ್ ಕಂಪೆನಿ, ಮುಂಬಯಿ ಸಿ.ಎಂ.ಡಿ ಶ್ರೀ.ಕೆ.ಎಂ ಶೆಟ್ಟಿ, ಮುಂಬಯಿನ ಚಾರ್ಟೆಡ್ ಅಕೌಟೆಂಟ್ ಸಿಎ ಶಂಕರ ಶೆಟ್ಟಿ,ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟರ ಸಂಘ ಹುಬ್ಬಳ್ಳಿ, ಧಾರವಾಡ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಮುರಳೀಧರ ಹೆಗ್ಡೆ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಹುಬ್ಬಳ್ಳಿ ಉದ್ಯಮಿ ಶ್ರೀ ರಾಜೇಂದ್ರ ವಿ.ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಬಂಟರ ಸಂಘ ಪಿಂಪ್ರಿ-ಚಿಂಚ್ವಾಡ್ ಅಧ್ಯಕ್ಷ ರಾಕೇಶ್ ರೈ ಬೆಳ್ಳಾರೆ, ತುಳುಕೂಟ ನಳಸ್ರೋಪ, ಮುಂಬಯಿನ ಅಧ್ಯಕ್ಷ ಶಶಿಧರ ಶೆಟ್ಟಿ ಇನ್ನಂಜೆ, ಸಿಟಿ ರಿಜಿನಲ್ ಕಮಿಟಿ ಬಂಟರ ಸಂಘ ಮುಂಬಯಿನ ಕಾರ್ಯಾಧ್ಯಕ್ಷ ಶಿವರಾಮ್ ಶೆಟ್ಟಿ ಕಾರ್ಯಣಗುತ್ತು, ಭಾಗವಹಿಸಲಿದ್ದಾರೆ.


ಪುಣೆ ಕನಕ ಹಾಸ್ಪಿಟಾಲಿಟಿಯ ಉದ್ಯಮಿ ಶ್ರೀ ಪ್ರಶಾಂತ್ ಶೆಟ್ಟಿ, ಪುಣೆ ಉದ್ಯಮಿಗಳಾದ ಕನ್ನಡತ್ಯಾರು ಆನಂದ ಶೆಟ್ಟಿ, ಪುಣೆ ಉದ್ಯಮಿ ಹಾಗೂ ತುಳುಕೂಟ ಪಿಂಪ್ರಿ-ಚಿಂಚ್ವಾರ್ ಅಧ್ಯಕ್ಷ ಕುರ್ಕಾಇದರ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ದಕ್ಷಿಣ ಪ್ರಾದೇಶಿಕ ವಲಯ, ಬಂಟರ ಸಂಘ ಪುಣೆಯ ಅಧ್ಯಕ್ಷ ಶೇಖರ ಸಿ. ಶೆಟ್ಟಿ, ದಕ್ಷಿಣ ಪ್ರಾದೇಶಿಕ ವಲಯ, ಬಂಟರ ಸಂಘ ಪುಣೆಯ ಉಪಾಧ್ಯಕ್ಷ ಸುಧಾಕರ ಸಿ.ಶೆಟ್ಟಿ, ತುಳುಕೂಟ ಪುಣೆ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಹಾಗೂಸಂಪತ್ ಶೆಟ್ಟಿ ಹೊಸಬೆಟ್ಟು ಮಡಂತ್ಯಾರು ಇವರುಗಳು ಉಪಸ್ಥಿತರಿರುವರು ಮತ್ತು ಬಂಟ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯದರ್ಶಿ ಸಂಜೀವ ಶೆಟ್ಟಿ ಕುಂಟಿನಿ, ಕೋಶಾಧಿಕಾರಿ ಕೆ.ಎನ್ ಆನಂದ ಶೆಟ್ಟಿ, ಉಪಾಧ್ಯಕ್ಷ ಕೆ.ವಿಠಲ ಶೆಟ್ಟಿ ಕೊಲ್ಲೊಟ್ಟು, ಜತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಯುವ ವಿಭಾಗದ ಅಧ್ಯಕ್ಷ ಸುಜಯ್ ಶೆಟ್ಟಿ ಬಾರ್ದಾಜೆ, ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ವಿ.ಶೆಟ್ಟಿ ಮತ್ತು ಬಂಟರಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ, ಬಂಟರ ಮಹಿಳಾ ವಿಭಾಗ, ಬಂಟರ ಯುವ ವಿಭಾಗದ ನಿರ್ದೇಶಕರು ಮತ್ತು ಸರ್ವಸದಸ್ಯರು ತಿಳಿಸಿದ್ದಾರೆ.

Leave a Comment

error: Content is protected !!