ಪಿಲಿಚಾಮುಂಡಿಕಲ್ಲಿನಲ್ಲಿ ಭಕ್ತಿ -ಭಾವ ಸಂಭ್ರಮದಿಂದ ಆದ್ದೂರಿಯಾಗಿ ನಡೆದ ದೊಂಪದಬಲಿ ಉತ್ಸವ

Suddi Udaya

ಗುರುವಾಯನಕೆರೆ: ದೊಂಪದಬಲಿ ಉತ್ಸವ ಸಮಿತಿ ಪಿಲಿಚಾಮುಂಡಿಕಲ್ಲು ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಪಿಲಿಚಾಮುಂಡಿ ದೈವದ ದೊಂಪದಬಲಿ ಉತ್ಸವವು ಡಿ.2ರಂದು ಪಿಲಿಚಾಮುಂಡಿಕಲ್ಲಿನಲ್ಲಿ ಭಕ್ತಿ -ಭಾವ, ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯಿತು .

ಸಂಜೆ 5ಗಂಟೆಗೆ ಪಾಡ್ಯಾರುಬೀಡು ಮನೆಯಿಂದ ದೈವದ ಭಂಡಾರವನ್ನು ಭಕ್ತರ ಉಪಸ್ಥಿತಿಯಲ್ಲಿ ವೈಭವದ ಮೆರವಣಿಗೆ ಮೂಲಕ ಪಿಲಿಚಾಮುಂಡಿಕಲ್ಲಿಗೆ ತರಲಾಯಿತು. ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು . ರಾತ್ರಿ ಶ್ರೀ ಪಿಲಿಚಾಮುಂಡಿ ದೈವದ ದೊಂಪದಬಲಿ ಉತ್ಸವ ಆದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಂತದಿಂದ ಹಾಗೂ ಪರವೂರಗಳಿಂದಲೂ ಭಕ್ತರು ಭಾಗವಹಿಸಿ, ಶ್ರೀ ದೈವದ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ, ಸುಕೇಶ್ ಕುಮಾರ್ ಕಡಂಬು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ದೊಂಪದಬಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರವೀಣ್‌ ಕುಮಾ‌ರ್ ಅಜ್ರಿ ಪಾಡ್ಯಾರುಬೀಡು, ಶ್ರೀನಿವಾಸ ಅಸ್ರಣ್ಣರು ಮೂಡುಮನೆ, ಸಮಿತಿ ಅಧ್ಯಕ್ಷ ಸೋಮಶೇಖರ ದೇವಸ್ಯ ಎ.ರಾಜಶೇಖರ ಶೆಟ್ಟಿ ಚಾವಡಿ ನಾಯಕರು ಅಳದಂಗಡಿ

ಅರಮನೆ, ಪ್ರಧಾನ ಕಾರ್ಯದರ್ಶಿ ಜಿ. ನಾಗೇಶ್ ಮೂಲ್ಯ , ಉಪಾಧ್ಯಕ್ಷ ವಿತೇಶ್ ಬಂಗೇರ, ಕಾರ್ಯದರ್ಶಿ ಶೋಭಿತ್ ಜೈನ್, ಕೋಶಾಧಿಕಾರಿ ನಾರಾಯಣ ಆಚಾರ್ಯ ಬರಾಯ ಹಾಗೂ ಸಮಿತಿಯ ಸರ್ವಸದಸ್ಯರ ಸಹಕಾರದಲ್ಲಿ ನೇಮೋತ್ಸವ ಯಶಸ್ವಿಯಾಗಿ ನಡೆಯಿತು.

Leave a Comment

error: Content is protected !!