24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ,ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಡಿ. 10 ರಂದು ಅಳದಂಗಡಿಯಲ್ಲಿ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮ

ಬೆಳ್ತಂಗಡಿ: ನಾಡಿನ ಸಮಸ್ತ ಹಿಂದೂ ಬಾಂಧವರ ಒಗ್ಗೂಡುವಿಕೆಯಿಂದ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮವು ಅಳದಂಗಡಿಯಲ್ಲಿ ಡಿ10 ರಂದು ನಡೆಯಲಿದ್ದು ವೇಣೂರು ಪ್ರಖಂಡದ 31 ಗ್ರಾಮಗಳ ಹಿಂದೂ ಭಾಂದವರು ಭಾಗಿಯಾಗಲಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಎಸ್.ಆರ್ ಭಾಸ್ಕರ ಸಾಲಿಯಾನ್ ಹೇಳಿದರು.

ಅವರು ಡಿ.4 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಿಂದೂ ಹೃದಯ ಸಂಗಮ ಕಾರ್ಯಕ್ರಮದ ಅಂಗವಾಗಿ ವೇಣೂರು ಪ್ರಖಂಡದ 31 ಗ್ರಾಮಗಳ ಮನೆಯನ್ನು ಸಂಪರ್ಕಿಸುವ ಕೆಲಸ ಮಾಡಿದ್ದು ಕಾರ್ಯಕ್ರಮಕ್ಕೆ 3 ರಿಂದ 5 ಸಾವಿರ ಜನರು ಸೇರುವ ನಿರೀಕ್ಷೆಯಿದೆ.ಇಗಾಗಲೇ ಗ್ರಾಮ ಸಮಿತಿ ರಚಿಸಿ ದೇವಸ್ಥಾನ, ಭಜನಾ ಮಂದಿರ ಹಾಗೂ ವಿವಿಧ ಶ್ರದ್ದಾಕೇಂದ್ರಗಳಲ್ಲಿ ಶ್ರಮಸೇವೆ ಹಾಗೂ ಭಾರತ ಮಾತಾನ ಪೂಜೆಯನ್ನು ನೇರವೆರಿಸಿದ್ದೇವೆ ಎಂದರು.

ಕಾರ್ಯಕ್ರಮದ ದಿನ ಅಳದಂಗಡಿ ಆನೆಮಹಲ್ ನಲ್ಲಿ ಎಲ್ಲರೂ ಒಟ್ಟಾಗಿ ವಿವಿಧ ವೇಷ ಭೂಷಣಗಳೊಂದಿಗೆ ,ನಾಡಿನ ಭಜನಾ ತಂಡದಗಳೊಂದಿಗೆ,ಕುಣಿತಾ ಭಜನೆಯೊಂದಿಗೆ ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ಸೇರಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಏಕ ಜಾತಿಧರ್ಮ ದ್ವಾರಕ ಮಾಯಿ ಮಠದ ಶ್ರೀ ಸಾಯಿ ಈಶ್ವರ ಗುರೂಜಿ ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮುಖ್ಯ ಭಾಷಣ ಮಾಡಲಿದ್ದಾರೆ. ಮಂಗಳೂರಿನ ವೆನ್ಕಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಹೃದಯ ಸಂಗಮ ಸಮಿತಿ ಅಧ್ಯಕ್ಷ ಜಯ ಸಾಲಿಯಾನ್,ಪ್ರಧಾನ ಕಾರ್ಯದರ್ಶಿ ಎಂ.ಪಿ ಶೇಖರ್,ಸಲಹೆಗಾರ ಮೋಹನ್ ಅಂಡಿಂಜೆ ಉಪಸ್ಥಿತರಿದ್ದರು.

Related posts

ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರುವಾಯನಕೆರೆಯಲ್ಲಿ ನೂತನ ಶಾಖೆ ಉದ್ಘಾಟನೆ

Suddi Udaya

ನಡ ಆಯುಷ್ಮಾನ್ ಆರೋಗ್ಯ ಸೇವಾ ಕೇಂದ್ರಕ್ಕೆ ಚಯರ್ ಕೊಡುಗೆ

Suddi Udaya

ಮಲವಂತಿಗೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಜಿಲ್ಲಾ ಮಟ್ಟದ ಕ್ರೀಡೋತ್ಸವ ಸ್ಪರ್ಧೆ: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲಾ ವಿದ್ಯಾರ್ಥಿಗಳು ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Suddi Udaya

ಮಂಜೊಟ್ಟಿ ದ್ವಿಚಕ್ರ ವಾಹನಕ್ಕೆಬಸ್‌ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯುವಕ ಸಾವು

Suddi Udaya

ಡಿ.7 ಧರ್ಮಸ್ಥಳದಲ್ಲಿ ಪದಾಧಿಕಾರಿಗಳ ಸಹಮಿಲನ ಹಾಗೂ ವ್ಯಸನ ಮುಕ್ತರ ಕುಟುಂಬೋತ್ಸವ

Suddi Udaya
error: Content is protected !!