ಇಂದಬೆಟ್ಟು : ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ ಆಶ್ರಯದಲ್ಲಿ ಬಾಲವಿಕಾಸ ಸಮಿತಿ, ಸ್ತ್ರೀ ಶಕ್ತಿ ಸಂಘ, ಗ್ರಾಮಾಭಿವೃದ್ಧಿ ಸ್ವ ಸಹಾಯ ಸಂಘ ಸಹಭಾಗಿತ್ವದಲ್ಲಿ ಇಂದಬೆಟ್ಟು ಗ್ರಾಮದ ಕಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ ಡಿ.2ರಂದು ಮನ್ವಿತ್‌ರ ಅಧ್ಯಕ್ಷತೆಯಲ್ಲಿ ಜರುಗಿತು. ವೇದಿಕೆಯಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷ ರಾಜೇಶ್ವರಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಿಆರ್ ಟಿ ತಾಲೂಕು ಸಂಯೋಜಕ ವಿನೋದ್ ಪ್ರಸಾದ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಆಶಾಕಾರ್ಯಕರ್ತೆ ಚಂದ್ರಕಾಂತಿ ಗರ್ಭಿಣಿ , ಬಾಣಂತಿ, ಶಿಶುವಿನ ಆರೈಕೆ ಬಗ್ಗೆ ಮಾಹಿತಿ ನೀಡಿದರು.
ಸ್ತ್ರೀ ಶಕ್ತಿ, ಸ್ವಸಹಾಯ ಸಂಘದ ಸದಸ್ಯರು ಹಾಗೂ ಪೋಷಕರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು. ಕೀರ್ತಿ ಪ್ರಶಾಂತ್ ಬಹುಮಾನ ನೀಡಿ ಸಹಕರಿಸಿದರು.
ರಾಜೇಶ್ವರಿ ತೆಂಗಿನಕಾಯಿ ಸುಲಿಯುವ ಯಂತ್ರ, ಕವಿತಾ ನೆಹರು ಹಾಗೂ ಗಾಂಧೀಜಿಯವರ ಫೋಟೋ ಇವುಗಳನ್ನು ಅಂಗನವಾಡಿಗೆ ಕೊಡುಗೆಯಾಗಿ ನೀಡಿದರು.
ಲತಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಸುಮತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಾಯಕಿ ಸುಮತಿ ಸಹಕರಿಸಿದರು.