25.7 C
ಪುತ್ತೂರು, ಬೆಳ್ತಂಗಡಿ
March 7, 2026
ನಿಧನ

ಸಾಲಬಾಧೆ – ಕೃಷಿಯಲ್ಲಿ ನಷ್ಟ: ಮಲವಂತಿಗೆ ಬಾಡಿಗೆ ಮನೆಯಲ್ಲಿರಾಧೀಶ್ ಆತ್ಮಹತ್ಯೆ

ಬೆಳ್ತಂಗಡಿ: ಸಾಲಬಾಧೆ ಹಾಗೂ ಕೃಷಿ ನಷ್ಟದಿಂದ ನೊಂದ ಕಲ್ಮಂಜ ಗ್ರಾಮದ ನಿಡಿಗಲ್ಲು ಆದರ್ಶ ನಗರ
ಮನೆ, ನಿವಾಸಿ ರಾಧೀಶ್ (36) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ರಾಧೀಶ್‌ ಪ್ರಸ್ತುತ ಮಲವಂತಿಗೆ ಗ್ರಾಮದ ಅಂತರ ಸೂರ್ಯಗುತ್ತು ರವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 3-4 ವರ್ಷಗಳ ಹಿಂದೆ ಕಲ್ಮಂಜ ಗ್ರಾಮದ ನಿಡಿಗಲ್ಲು ಎಂಬಲ್ಲಿ ಹೊಸ ಮನೆಯನ್ನು ನಿರ್ಮಿಸಿ ಮನೆ ಕಟ್ಟುವ ಸಮಯ ಬ್ಯಾಂಕಿನಿಂದ ಸಾಲವನ್ನು ಮಾಡಕೊಂಡಿದ್ದರು. ಅಲ್ಲದೇ ಲೀಸ್ ಗೆ ಮಾಡಿಕೊಂಡಿದ್ದ ಕೃಷಿ ತೋಟದಲ್ಲಿಯೂ ನಷ್ಟ ಉಂಟಾಗಿದ್ದು ಈ ಎಲ್ಲಾ ಸಮಸ್ಯೆಗಳಿಂದ ಮದ್ಯ ಸೇವಿಸಲು ಪ್ರಾರಂಭಿಸಿದ್ದರು. ಕಳೆದ ಜೂ.7 ರಂದು ಬಾಡಿಗೆ ಮನೆಯಲ್ಲಿ ರಾತ್ರಿ ಸಮಯ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ ಸಮಯ ಬಿದ್ದು ಹಣೆಯ ಭಾಗಕ್ಕೆ ತಾಗಿ ಈ ಬಗ್ಗೆ ತಲೆಯಲ್ಲಿ ನರದ ತೊಂದರೆ ಕಾಣಿಸಿಕೊಂಡು 1 ನ್ಯಾರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ವಿಶ್ರಾಂತಿಯಲ್ಲಿ ಇದ್ದವರು ಡಿ.4 ರಂದು ರಾತ್ರಿ ಸುಮಾರು 9 ಗಂಟೆಯಿಂದ 9.45 ಗಂಟೆಯ ಮಧ್ಯೆದ ಅವಧಿಯಲ್ಲಿ ಅಂತರ ಬಾಡಿಗೆ ಮನೆಯ ಎದುರಿನ ಶೀಟಿನ ರಾಡಿಗೆ ಕುತ್ತಿಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ರಂಜಿನಿ ಅವರು ನೀಡಿದ ದೂರಿನಂತೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಯುಡಿ ಆರ್ ಸಂಖ್ಯೆ: 57/2023 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಕುಕ್ಕೇಡಿ ಉಳ್ತೂರು ಬಳಿಯ ಕಡ್ತ್ಯಾರ್ ಎಂಬಲ್ಲಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ದುರಂತದಲ್ಲಿ ಚಿದ್ರಗೊಂಡು ದೂರಕ್ಕೆ ಎಸೆಯಲ್ಪಟ್ಟ ದೇಹಗಳು – ಮೂವರು ಸಾವು : ಹಲವರಿಗೆ ಗಂಭೀರ ಗಾಯ

Suddi Udaya

ನಿವೃತ್ತ ಶಿಕ್ಷಕಿ ಉಜಿರೆ ಗ್ರಾಮದ ಶಿವಾಜಿನಗರ ನಿವಾಸಿಶಕುಂತಳ ಕಾರoತ ನಿಧನ

Suddi Udaya

ಕೊಕ್ಕಡ: ಸೌತಡ್ಕ ನಿವಾಸಿ ಸಿರಾಜುದ್ದೀನ್ ನಿಧನ

Suddi Udaya

ಬಜಿರೆ: ನಾಟಿ ವೈದ್ಯ ದುಗ್ಗಪ್ಪ ಗೌಡ ನಿಧನ

Suddi Udaya

ಕಬಡ್ಡಿ ಪಟು ವಿದ್ಯಾರ್ಥಿ ಚಿನ್ಮಯ ಗೌಡ ಪಿ.ಕೆ ನಿಧನ

Suddi Udaya

ಉಜಿರೆ: ಪದ್ಮನಾಭ ಕುಂಜತ್ತಾಯ ಹೃದಯಾಘಾತದಿಂದ ನಿಧನ

Suddi Udaya
error: Content is protected !!