
ತೆoಕಕಾರಂದೂರು: ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮಾಚರಣೆಯಿಂದ ಆಚರಿಸಲಾಯಿತು. ಸಲಹಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿಶ್ವನಾಥ ಹೊಳ್ಳ ಬಳಂಜ, ಎಂ.ಸಿ. ನಾರಾಯಣ ಗೌಡ, ನಾರಾಯಣ ರಾವ್ ಕಾಪಿನಡ್ಕ, ಅಬ್ದುಲ್ ಖಾದರ್ ಕರಂಬಾರು, ಗ್ರಾಮ ಪಂಚಾಯತ್ ಸದಸ್ಯೆ ಪದ್ಮಾವತಿ, ಚಂದ್ರ ಪೂಜಾರಿ ಗೌ. ಅಧ್ಯಕ್ಷರು ಸ. ಸಮಿತಿ, ಕೊರಗಪ್ಪ ನಾಯ್ಕ ಗಿಳಿಕಾಪು, ಸುಂದರ ಲಿಂಗಾಯತ, ಗುಲಾಬಿ ಎಂ.ಎನ್, ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಕಿಶೋರ್ ಹೆಗ್ಡೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಂ.ಸಿ. ನಾರಾಯಣ ಗೌಡ, ಶ್ರೀಯುತ ವಿಶ್ವನಾಥ ಹೊಳ್ಳ ಬಳಂಜ, ನಾರಾಯಣ ರಾವ್ ಕಾಪಿನಡ್ಕ, ಕೊರಗಪ್ಪ ನಾಯ್ಕ ಗಿಳಿಕಾಪು ಇವರುಗಳು ಅಂಗನವಾಡಿ ಗೆ ನೀಡಿದ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ತಾಯಂದಿರು, ಊರವರು, ಸ್ತ್ರೀ ಶಕ್ತಿ ತಂಡದ ಸದಸ್ಯರು, ಸ್ವಸಹಾಯ ತಂಡದ ಸದಸ್ಯರು, ಸಂಜೀವಿನಿ ತಂಡದ ಸದಸ್ಯರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 1ನೇ ತರಗತಿಗೆ ಸೇರಿದ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿ ನೆನಪಿನ ಕಾಣಿಕೆ ನೀಡಲಾಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಪುಟಾಣಿ ಮಕ್ಕಳು ಪ್ರಾರ್ಥಿಸಿದರು. ಅಂಜನಿ ಎಂ. ರಾವ್ ಸ್ವಾಗತಿಸಿ, ಮನಿತಾ ಸಿ. ಶೆಟ್ಟಿ ನಿರೂಪಿಸಿ, ವಂದಿಸಿದರು. ಶ್ರಿಮತಿ ಸುನಂದ ಸಹಕರಿಸಿದರು.