April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಬ್ಬಡಿ ಪಂದ್ಯಾಟ: ಉಜಿರೆ ಎಸ್ ಡಿ ಎಮ್ ಕಾಲೇಜು ಪುರುಷರ ವಿಭಾಗ ಚಾಂಪಿಯನ್: ತಂಡದ ಆಟಗಾರರಲ್ಲಿ ನಾಲ್ವರು ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಶಿಪ್

ಉಜಿರೆ: ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷರ ಕಬ್ಬಡಿ ಪಂದ್ಯಾಟವು ಅಜ್ಜರಕಾಡ್ ಸ್ಟೇಡಿಯಂ ಉಡುಪಿಯಲ್ಲಿ ದಿ. 4 ರಂದು ನಡೆಯಿತು. ಉಜಿರೆ ಎಸ್ ಡಿ ಎಮ್ ಕಾಲೇಜು ಪುರುಷರು ವಿಭಾಗದ ಕಬ್ಬಡಿ ಪಂದ್ಯಾಟದಲ್ಲಿ ಚಾಂಪಿಯನ್ ಶಿಪ್ ಪಟ್ಟವನ್ನು ಅಲಂಕರಿಸಿದೆ.


ಈ ತಂಡದ ನಾಲ್ಕು ಆಟಗಾರರಾದ ಸುಶಾಂತ್ ಶೆಟ್ಟಿ , ಶಶಾಂಕ್ ಆಚಾರ್ಯ, ಮಹಮ್ಮದ್ ಆಫ್ರಿದ್, ಪ್ರಜ್ವಲ್ ಇವರು ಮಂಗಳೂರು ವಿಶ್ವವಿದ್ಯಾನಿಲಯದ ದಕ್ಷಿಣ ವಿಭಾಗ ಮಟ್ಟ ಹಾಗೂ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕ ಪಡೆದು ಖೇಲೋ ಇಂಡಿಯಾ ಗೆ ಮಂಗಳೂರು ವಿಶ್ವವಿದ್ಯಾನಿಲಯದ ತಂಡದ ಮೂಲಕ ಆಯ್ಕೆಯಾಗಿರುತ್ತಾರೆ.


ಸುಶಾಂತ ಶೆಟ್ಟಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡದ ನಾಯಕ ಹಾಗೂ ಉಜಿರೆ ಕಬಡ್ಡಿ ತಂಡದ ನಾಯಕರಾಗಿದ್ದಾರೆ. ಈ ಪಂದ್ಯಾಟದಲ್ಲಿ ಸುಶಾಂತ್ ಶೆಟ್ಟಿ ಉತ್ತಮ ಹಿಡಿತಗಾರ, ಹಾಗೂ ಪ್ರಜ್ವಲ್ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಎಸ್ ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯ ಹರ್ಷೇಂದ್ರ ಕುಮಾರ್ ಮತ್ತು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಬಿ. ಎ ಕುಮಾರ್ ಹೆಗ್ಡೆ ಇವರು ಕ್ರೀಡಾಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಎಸ್‌ಡಿಎಂ ಕ್ರೀಡಾ ವಿಭಾಗದ ನಿರ್ದೇಶಕರಾದ ರಮೇಶ್ ಹೆಚ್ ತಂಡವನ್ನು ಪ್ರೋತ್ಸಾಹಿಸಿದರು.
ಇವರಿಗೆ ಕೃಷ್ಣಾನಂದ ರಾವ್ ತರಬೇತಿಯನ್ನು ನೀಡಿರುತ್ತಾರೆ. ಹಾಗೂ ಸುಧೀನ ಪೂಜಾರಿ, ಸಂದೇಶ್ ಪೂoಜ, ಶಾರದಾ ಇವರು ಸಹಕರಿಸಿದ್ದಾರೆ.

Related posts

ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ: ಬದನಾಜೆ ಸ.ಉ. ಪ್ರಾ.ಶಾಲಾ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

Suddi Udaya

ಅಳದಂಗಡಿ ಶ್ರೀ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನಕ್ಕೆ ನಟ ವಿಜಯರಾಘವೇಂದ್ರ ಭೇಟಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

Suddi Udaya

ಅಳದಂಗಡಿ: ಲುಕ್ ಮಿ ಲೇಡಿಸ್ ಬ್ಯೂಟಿ ಝೋನ್ ಉದ್ಘಾಟನೆ: ಲೇಡಿಸ್ ಟೈಲರಿಂಗ್ ಮತ್ತು ತರಬೇತಿ ಕೇಂದ್ರ, ಟೈಲರಿಂಗ್ ಮೆಟಿರಿಯಲ್ಸ್ & ಎಂಬ್ರೈಡರಿ ವರ್ಕ್ಸ್

Suddi Udaya

ಉಜಿರೆ: ಕನಸು ಇದು ಭರವಸೆಯ ಬೆಳಕು ಕಾರ್ಯಕ್ರಮ

Suddi Udaya
error: Content is protected !!