ಹೊಕ್ಕಾಡಿಗೋಳಿ : ಸುಮಾರು 100 ವರ್ಷಗಳ ಹಿನ್ನಲೆ ಹೊಂದಿರುವ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿ ‘ವೀರ-ವಿಕ್ರಮ’ ಜೋಡುಕರೆ ಕಂಬಳ ಮಾ.16ರಂದು ನಡೆಯಲಿದ್ದು, ಸಮರ್ಪಕ ಸ್ಥಳಾವಕಾಶ ‘ಕೊರತೆ ಹಿನ್ನೆಲೆಯಲ್ಲಿ ಸಮೀಪದ ಕೊಡಂಗೆ ಎಂಬಲ್ಲಿ ಐದು ಎಕರೆ ಸರ್ಕಾರಿ ಜಮೀನಿನಲ್ಲಿ ಶಾಶ್ವತ ಕರೆ ನಿರ್ಮಿಸಲು ಕಂಬಳ ಸಮಿತಿ ಮಹತ್ತರ ನಿರ್ಧಾರ ಕೈಗೊಂಡಿದೆ ಎಂದು ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಹೇಳಿದ್ದಾರೆ.
ಅವರು ಹೊಕ್ಕಾಡಿಗೋಳಿ ಕೊಡಂಗೆಯಲ್ಲಿ ‘ವೀರ-ವಿಕ್ರಮ’ ಜೋಡುಕರೆ ಕಂಬಳ ಶಾಶ್ವತ ಕರೆ ನಿರ್ಮಾಣಕ್ಕೆ ಡಿ.6 ರಂದು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಳದ ಕೃಷ್ಣಪ್ರಸಾದ್ ಆಸ್ರಣ್ಣ ಭೂಮಿ ಪೂಜೆ ನೆರವೇರಿಸಿದರು. ಹಿರಿಯ
ಕಂಬಳ ಸಾಧಕ ಜಾನ್‌ಸಿರಿಲ್ ಡಿಸೋಜ(ಅಪ್ಪು) ಸರಪಾಡಿ ಅವರಿಗೆ ಕರೆ ನಿರ್ಮಾಣದ ವೀಳ್ಯ ಹಸ್ತಾಂತರಿಸಲಾಯಿತು.
ದೇವಳದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಲೋಕೇಶ ಶೆಟ್ಟಿ, ಪ್ರಗತಿಪರ ಕೃಷಿಕ ಶ್ರೀನಿವಾಸ ಆಳ್ವ ಆಲಂಗಾರುಗುತ್ತು, ಕಂಬಳ ಸಮಿತಿ ನೂತನ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಪ್ರಮುಖರಾದ ಡಾ.ಪ್ರಭಾಚಂದ್ರ ಜೈನ್, ಡಾ.ಸುದೀಪ್ ಕುಮಾರ್ ಜೈನ್, ವಸಂತ ಶೆಟ್ಟಿ ಕೇದಗೆ, ಸಂದೇಶ ಶೆಟ್ಟಿ ಪೊಡುಂಬ, ಸ್ಥಳದಾನಿ ಓಬಯ ಪೂಜಾರಿ, ಕೊರಗಪ್ಪ ಪೂಜಾರಿ, ಜನಾರ್ದನ ಬಂಗೇರ ತಿಮರಡ್ಡಿ, ಗೋಪಾಲ ಬಂಗೇರ, ಸುಧಾಕರ ಚೌಟ ಬಾವ, ಪುಷ್ಪರಾಜ ಶೆಟ್ಟಿ, ಬಾಬುರಾಜೇಂದ್ರ ಶೆಟ್ಟಿ, ರಾಜೇಶ ಶೆಟ್ಟಿ ಸೀತಾಳ, ಕಾಂತಣ್ಣ ಶೆಟ್ಟಿ ಹೊಂಗರಹಿತ್ಲು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಹರೀಶ ಹಿಂಗಾಣಿ, ಸುರೇಶ ಶೆಟ್ಟಿ ಹಕ್ಕೇರಿ, ಉಮೇಶ ಹಿಂಗಾಣಿ, ರಾಜೇಶ ಶೆಟ್ಟಿ ಕೊನೆರೊಟ್ಟು, ಶಿವಾನಂದ ರೈ, ಲೋಕನಾಥ ಶೆಟ್ಟಿ ಪಮ್ಜ, ಅಬ್ದುಲ್ ರಹಿಮಾನ್, ಉಮೇಶ ಶೆಟ್ಟಿ ಕೊನೆರೊಟ್ಟು, ನವೀನ ಪೂಜಾರಿ ಕುಂಜಾಡಿ, ರತ್ನಾಕರ ಶೆಟ್ಟಿ ಹೊಕ್ಕಾಡಿಗೋಳಿ ಉಪಸ್ಥಿತರಿದ್ದರು.
ಕಂಬಳ ಸಮಿತಿ ಗೌರವಾಧ್ಯಕ್ಷ, ವಕೀಲ ಸುರೇಶ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು ವಂದಿಸಿದರು.