September 6, 2026
ನಿಧನ

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಿವಾಸಿ, ಕನ್ನಡದ ಹಿರಿಯ ನಟಿ, ಲೀಲಾವತಿ ಇಂದು ಸಂಜೆ ನಿಧನ

ಬೆಳ್ತಂಗಡಿ: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಬೆಳ್ತಂಗಡಿಯ ತಾಲೂಕಿನ ನಾವೂರು ಗ್ರಾಮದ ಕೇಳ್ತಾಜೆ ನಿವಾಸಿ, ಕನ್ನಡದ ಹಿರಿಯ ನಟಿ, ಲೀಲಾವತಿ (85ವ) ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಡಿಸೆಂಬರ್ 08 ಇಂದು ಏರುಪೇರು ಉಂಟಾಗಿತ್ತು, ತಕ್ಷಣ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ವಾರಗಳಿಂದ ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಲೀಲಾವತಿ ಅವರು ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

ಕನ್ನಡದಲ್ಲಿ ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದ ಲೀಲಾವತಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಕನ್ನಡ ಚಿತ್ರರಂಗಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ.
ಲೀಲಾವತಿ ಅವರು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕೇಳ್ತಾಜೆ ಸಮೀಪದ ನಿವಾಸಿಯಾಗಿದ್ದಾರೆ.

Related posts

ಕಲ್ಮಂಜ ಶ್ಯಾಮ ಸುಂದರ ಹೆಬ್ಬಾರ್ ನಿಧನ

Suddi Udaya

ಕೊಕ್ಕಡ: ಬೋಳದಬೈಲು ಅಂಗನವಾಡಿ ಕಾರ್ಯಕರ್ತೆ ಸಂಗೀತಾ ನಿಧನ

Suddi Udaya

ನಿಡ್ಲೆ: ಬೂಡುಜಾಲು ನಿವಾಸಿ ವಿಶ್ವನಾಥ ಶೆಟ್ಟಿ ನಿಧನ

Suddi Udaya

ಕಾರ್ಯತಡ್ಕ ನಿವಾಸಿ ಜೋನ್ ವೆಲ್ಲಂಕಲ್ ನಿಧನ

Suddi Udaya

ಬಳಂಜ: ಎಲ್ಯೊಟ್ಟು ನಿವಾಸಿ ಸೋಮನಾಥ ಪೂಜಾರಿ ನಿಧನ

Suddi Udaya

ಹಿರಿಯ ಯಕ್ಷಗಾನ ಕಲಾವಿದ ಬಿ. ಗೋಪಾಲಕೃಷ್ಣ ನಿಧನ

Suddi Udaya
error: Content is protected !!