September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಮುಂಡಾಜೆ : ಅರೆಕ್ಕಲ್ ನಿವಾಸಿ ಹಿರಿಯ ಕೃಷಿಕ ಇಸ್ಮಾಯಿಲ್ ಹಾಜಿ ಮೂಲೆ ನಿಧನ

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಅರೆಕ್ಕಲ್ ನಿವಾಸಿ, ಹಿರಿಯ ಕೃಷಿಕ ಹಾಗೂ ಅಡಿಕೆ ವ್ಯಾಪಾರಿ ಇಸ್ಮಾಯಿಲ್ ಹಾಜಿ ಮೂಲೆ (ಮೂಲೆ ಮೋನು ಹಾಜಿ) ಅವರು ಅಲ್ಪ ಕಾಲದ ಅಸೌಖ್ಯದಿಂದ ಡಿ.30 ರಂದು ನಿಧನರಾಗಿದ್ದಾರೆ‌.


ಮೂಲತಃ ಮಂಗಳೂರು ತಾಲೂಕು ಕೊಣಾಜೆ ಸನಿಹದ ನಡುಪದವು ಮೂಲೆ ನಿವಾಸಿಯಾಗಿರುವ ಅವರು ಅಲ್ಲಿನ ಅಲ್ ಉಮರ್ ಜುಮ್ಮಾ ಮಸೀದಿ ನಡುಪದವು ಕೈರಂಗಳ ಜಮಾಅತಿನ ಮಾಜಿ ಅಧ್ಯಕ್ಷರೂ ಹಿರಿಯ ಸಾಮಾಜಿಕ ಮುಂದಾಳುವೂ ಆಗಿದ್ದರು. ಊರಿನಲ್ಲಿ ಅವರು ಮೂಲೆ ಮೋನು ಹಾಜಿ ಎಂದೇ ಅರಿಯಲ್ಪಡುತ್ತಿದ್ದರು. ನಡುಪದವು ಸರಕಾರಿ ಶಾಲೆಗೆ ಜಾಗ ಮಂಜೂರಾತಿ ಹಾಗೂ ಕಟ್ಟಡ ರಚನೆಗಾಗಿ ಹೋರಾಟ ಮಾಡಿ‌ ಯಶಸ್ವಿ ಯಾಗಿದ್ದರು. ಅವರ‌ ನಿಧನ‌ದ ಗೌರವಾರ್ಥ ಶಾಲೆಗೆ ರಜೆ ಸಾರಿ ಶೋಕ ಆಚರಿಸಲಾಯಿತು.

ಮೃತರು ಪತ್ನಿ ಐಸಮ್ಮ, ಮಕ್ಕಳಾದ ಹಮೀದ್,‌ ಮುಹಮ್ಮದ್, ಕಾಸಿಂ ಮತ್ತು ಏಕೈಕ ಪುತ್ರಿ ಪುತ್ತುಮ್ಮ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಸಹಿತ ಅನೇಕ ಗಣ್ಯರು ಭೇಟಿ ಮಾಡಿ ಅಂತಿಮ ದರ್ಶನ ಪಡೆದು ಮನೆಯವರಗೆ ಸಾಂತ್ವಾನ ಹೇಳಿದರು.

Related posts

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮೈಟ್ ವಿದ್ಯಾರ್ಥಿಗಳಿಂದ ಪ್ರಾಜೆಕ್ಟ್‌ ವಿನ್ಯಾಸ ಕಾರ್ಯಾಗಾರ

Suddi Udaya

ಓಡಿಲ್ನಾಳ ಲಾಡಿ ದರ್ಖಾಸ್ ಎಂಬಲ್ಲಿ ಎರಡು ಮರಿ ಸಹಿತ ಕಂಡು ಬಂದ ಚಿರತೆ

Suddi Udaya

ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಸ್ಪಂದನರವರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮ ನಟ ವಿಜಯರಾಘವೇಂದ್ರ ಕುಟುಂಬಸ್ಥರು ಭಾಗಿ

Suddi Udaya

ನಡ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ: ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ

Suddi Udaya

ಕಾಪಿನಡ್ಕ ಮನೆ ನಿವಾಸಿ ಸೀತಾರಾಮ ಎಂ. ಮೆಹೆಂದಳೆ ನಿಧನ

Suddi Udaya

ಮೇಲಂತಬೆಟ್ಟು ಬದಿನಡೆ ನಾಗಬ್ರಹ್ಮ ದೇವಸ್ಥಾನದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ, ಗರ್ಭಗುಡಿಯಲ್ಲಿ ನಾಗದೇವರ ಪ್ರತ್ಯಕ್ಷ

Suddi Udaya
error: Content is protected !!