23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಧರ್ಮಸ್ಥಳ ಲಕ್ಷದೀಪೋತ್ಸವ : ರಾಜ್ಯಮಟ್ಟದ 44ನೇ ವಷ೯ದ ವಸ್ತುಪ್ರದರ್ಶನ ಉದ್ಘಾಟನೆ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಪೌಢಶಾಲಾ ವಠಾರದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ 44ನೇ ವಸ್ತುಪ್ರದರ್ಶನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಡಿ.8 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್, ಆಪ್ತ ಸಹಾಯಕ ವೀರು ಶೆಟ್ಟಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಸಿ.ಇ.ಒ. ಅನಿಲ್ ಕುಮಾರ್, ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್, ವಸ್ತು ಪ್ರದರ್ಶನ ಮಳಿಗೆಯ ಎಸ್‌ಡಿಎಂ ಆಸ್ಪತ್ರೆಯ ಆಡಳಿತಾಧಿಕಾರಿ ಜನಾರ್ದನ, ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಿಸ್, ರತ್ನರಾಜ ಹೆಗ್ಡೆ, ರಾಮಕೃಷ್ಣ ಗೌಡ, ಮೊದಲಾದವರು ಉಪಸ್ಥಿತರಿದ್ದರು.

This image has an empty alt attribute; its file name is dhar4.jpg

ಮಳಿಗೆಗಳಲ್ಲಿ ಸರಕಾರಿ ಮಳಿಗೆಗಳು [8]. ಬ್ಯಾಂಕ್‌ಗಳು[5]. ಧಾರ್ಮಿಕ ಮಳಿಗೆ [2] ಜೀವ ವಿಮೆ, ಶಿಕ್ಷಣ ಸಂಸ್ಥೆಗಳು, ಅಂಚೆ ಇಲಾಖೆ, ಪುಸ್ತಕ ಮಳಿಗೆಗಳು [5] ಗ್ರಾಮಾಭಿವೃದ್ಧಿ ಸಿರಿ ಉತ್ಪನ್ನಗಳು, ನಂದಿನಿ ಉತ್ಪನ್ನಗಳು, ಸೋಲಾರ್‌ಸಿಸ್ಟಮ್, ಅಗರಬತ್ತಿಗಳು, ವಾಹನ ಪ್ರದರ್ಶನ ಮಳಿಗೆ [3], ನರ್ಸರಿ/ಹನಿ ನೀರಾವರಿ, ಕೃಷಿ ಯಂತ್ರೋಪಕರಣಗಳು[5]. ಸಾವಯವ ಕೃಷಿ ಉತ್ಪನ್ನಗಳು, ಆಯುರ್ವೇದಿಕ್ ಔಷಧಿಗಳು, ರುಡ್‌ಸೆಟ್ ಬಜಾರ್, ಎಸ್.ಕೆ.ಡಿ.ಆರ್.ಡಿ.ಪಿ ಪರಿಚಯ ಮಳಿಗೆ, ತಿಂಡಿ/ತಿನಸುಗಳು, ಗೋಲಿ ಸೋಡಾ, ವಸ್ತ್ರ ಮಳಿಗೆಗಳು, ತರಕಾರಿ ಬೀಜಗಳು, ಡ್ರೈ ಪೂಟ್ಸ್, ಮರದ ವಸ್ತುಗಳು, ಗುಡಿ ಕೈಗಾರಿಕೆ,ಕರಕುಶಲ ವಸ್ತು, ಹೊಲಿಗೆ ಯಂತ್ರ, ದೇವರ ದೀಪ ಪೂಜಾ ಸಾಮಾಗ್ರಿ, ಗೋ ಔಷದಿ/ಉತ್ಪನ್ನಗಳು[2], ಕ್ಯಾಂಟಿನ್, ಹರ್ಬಲ್ ಪ್ರೊಡಕ್ಟ್, ಸಿಲುವೇರಿಯ, ಲೆಮನ್ ಸ್ಕ್ವೀಸರ್, ಚಪಾತಿ ಮೇಕರ್, ಅಕ್ಟೇರಿಯಂ, ಮಿಲ್ಲೆಟ್ ಇತ್ಯಾದಿ ಇರಲಿದೆ.

ಸಮಿತಿ ಮೇಲ್ವಿಚಾರಕರು:
ಮಳಿಗೆದಾರರ ಮೇಲ್ವಿಚಾರಕರಾಗಿ ಯತೀಶ್ ಕೆ ಬಳಂಜ, ರವಿಚಂದ್ರ ಬಿ ರತ್ನಮಾನಸ, ಮಾಹಿತಿ ಕಛೇರಿ ನಿರ್ವಹಣೆ ಕೃಷ್ಣಪ್ರಸಾದ, ಮಂಜು ಆರ್, ಸಾಂಸ್ಕೃತಿಕ ಕಾರ್ಯಕ್ರಮ ಸುನಿಲ್ ಪಂಡಿತ್, ಯುವರಾಜ್ ಅಧ್ಯಾಪಕರು, ಅನೌನ್ಸಿಂಗ್ ನಿರ್ವಹಣೆ ಶ್ಯಾಮ್ ಪ್ರಸಾದ್ ಮತ್ತು ಸಿದ್ದವನದ 2 ವಿದ್ಯಾರ್ಥಿಗಳು, ಸ್ವಚ್ಚತೆಯ ವ್ಯವಸ್ಥೆ ಲ|| ರಾಮಕೃಷ್ಣ ಗೌಡ, ರಕ್ಷಿತ್ ಡಿ ಎಮ್ ಸಿ., ವಿಶ್ವೇಶ್ ಮಾಹಿತಿ ಕಛೇರಿ, ನೀರು ಮತ್ತು ಶೌಚಾಲಯ ನಿರ್ವಹಣೆ ಚಿದಾನಂದ, ಅನಿಲ್ ಮತ್ತು ಶ್ರೀಮತಿ ಸುನಿತ, ಪೀಠೋಪಕರಣ ವಿತರಣೆ ಶೀಮತಿ ಲಕ್ಷ್ಮಿ, ಶ್ರೀಮತಿ ತ್ರಿವೇಣಿ, ರಮೇಶ್ ಅಟೆಂಡರ್, ಶ್ರೀಮತಿ ತ್ರಿವೇಣಿ, ಕಲಾವಿದರ ಊಟದ/ ಆಸನದ ವ್ಯವಸ್ಥೆ ಸದಾನಂದ, ಉದಯ ಕುಮಾರ್, ಸ್ವಯಂ ಸೇವಕರ ಜವಾಬ್ದಾರಿ ತ್ರಿಭುವನ್ ಜೈನ್, ಉದಯರಾಜ್ ರತ್ನಮಾನಸ, ಕಾವಲುಗಾರು – ಅಗ್ನಿಶಾಮಕದಳ ರವಿಚಂದ್ರ ಬಿ ರತ್ನಮಾನಸ, ಮಳಿಗೆದಾರರಿಗೆ ವಸತಿ ವ್ಯವಸ್ಥೆ ಅನಿಲ್ ಅಟೆಂಡರ್, ಧ್ವನಿವರ್ಧಕ ಮತ್ತು ಬೆಳಕಿನ ವ್ಯವಸ್ಥೆ ಮನೋಹರ ಮತ್ತು ಬಳಗ ವಹಿಸಲಿದ್ದಾರೆ.

Related posts

ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.97 ಫಲಿತಾಂಶ

Suddi Udaya

ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ರಿಂದ ಮತದಾನ

Suddi Udaya

ಉಪ ವಲಯ ಅರಣ್ಯಾಧಿಕಾರಿ ಉಜಿರೆಯ ಕಮಲಾ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ

Suddi Udaya

ಪದ್ಮುಂಜ ಪ್ರಾ.ಕೃ.ಪ. ಸಹಕಾರಿ ಸಂಘದ ಪ್ರಭಾರ ಸಿಇಒ ಆಗಿ ಅಂಕಿತಾ ಬಿ ಅಧಿಕಾರ ಸ್ವೀಕಾರ

Suddi Udaya

ಧರ್ಮಸ್ಥಳ ಶಿವಶಕ್ತಿ ಅಯ್ಯಂಗಾರ್ ಬೇಕರಿ, ಉಜಿರೆಯ ಅಮರ್ಥ್ಯ ಬೇಕರಿಯಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು

Suddi Udaya

ನಾಲ್ಕೂರು ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕರುಣಾಕರ ಹೆಗ್ಡೆ ಆಯ್ಕೆ

Suddi Udaya
error: Content is protected !!