April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಇದರ ವಸ್ತು ಪ್ರದರ್ಶನ ಮಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ರವರಿಂದ ಉದ್ಘಾಟನೆ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಲಕ್ಷ ದೀಪೋತ್ಸವದ ವಸ್ತು ಪ್ರದರ್ಶನ ಮಂಟಪದ ಸ್ಟಾಲ್ ನಂಬರ್ 156 ರಲ್ಲಿ ಕಲ್ಪವೃಕ್ಷ ಟೀಮ್ ಮೂಡುಬಿದ್ರೆ ಹಾಗೂ ಧರ್ಮಸ್ಥಳ ಗ್ರಾಮ್ ಪಂಚಾಯತ್ ಏಕಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ, ಇದರ ಪ್ಲಾಸ್ಟಿಕ್ ಉತ್ಪನ್ನಗಳ ಬದಲಿ ವ್ಯವಸ್ಥೆಯ ಸಾಮಾಗ್ರಿಗಳ ಪ್ರದರ್ಶನ ಮಳಿಗೆ ಮಾಡಲಾಗಿದೆ. ಸದ್ರಿ ಮಳಿಗೆಯನ್ನು ಸಹಾಯಕ ಕಮಿಷನರ್ ಪುತ್ತೂರು ಗಿರೀಶ್ ನಂದನ್ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲಾ, ಉಪಾಧ್ಯಕ್ಷರಾದ ಪಿ ಶ್ರೀನಿವಾಸ್ ರಾವ್, ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರರಾವ್, ಶ್ರೀಮತಿ ಸುನಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ. ಪಂಚಾಯತಿ ಕಾರ್ಯದರ್ಶಿ ದಿನೇಶ್ ಎಂ, ಲೆಕ್ಕಸಹಾಯಕರಾದ ಶ್ರೀಮತಿ ಪ್ರಮೀಳಾ, ಕ್ಷೇತ್ರದ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮ್ಯಾನೇಜರ್ ಸುಭಾಷ್ಚಂದ್ರರಾಜ್, ಶ್ರೀಮತಿ ಸಂಧ್ಯಾ ಭಟ್ ಮೂಡಬಿದ್ರೆ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related posts

ಬಂದಾರು :ಪೆರ್ಲ -ಬೈಪಾಡಿ ನಿವಾಸಿ ನಾರಾಯಣ ಪೂಜಾರಿ ನಿಧನ

Suddi Udaya

ಇಂಡೋ ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್ ತ್ರೋಬಾಲ್ ಪಂದ್ಯಾಟ: ಕಣಿಯೂರಿನ ಯೂನಿತ್ ಕೆ. ನಾಯಕತ್ವದ ತಂಡ ಪ್ರಥಮ ಸ್ಥಾನ

Suddi Udaya

ಧರ್ಮಸ್ಥಳ: ‘ಉನ್ನತಿ’ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್’ ಶುಭಾರಂಭ

Suddi Udaya

ಸೌತಡ್ಕ ದೇವಸ್ಥಾನಕ್ಕೆ ಸ್ಥಿರಾಸ್ತಿ ಖರೀದಿಯಲ್ಲಿ ಅವ್ಯವಹಾರ: ತನಿಖೆಗೆ ಸಹಾಯಕ ಆಯುಕ್ತರಿಂದ ಆದೇಶ

Suddi Udaya

ಕನ್ಯಾಡಿ ಶ್ರೀ ಹರಿದ್ವಾರ ಶಾಖಾ ಮಠದಲ್ಲಿ 7ನೇ ವರ್ಷದ ವಾರ್ಷಿಕೋತ್ಸವ

Suddi Udaya

ತರ್ಬೀಯತುಲ್ ಇಸ್ಲಾಂ ದಮ್ಮಾಂ ಕರ್ನಾಟಕ ಮದ್ರಸದ ಮಿಹ್ರಜಾನುಲ್ ಬಿದಾಯ ವರ್ಷಾರಂಭ ಅಧ್ಯಯನ ಶಿಬಿರ

Suddi Udaya
error: Content is protected !!