ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಉದ್ಘಾಟಣೆಯನ್ನು ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್ ರವರು ನೆರವೇರಿಸಿ ಮಾತನಾಡಿ ಮಕ್ಕಳು ಮಣ್ಣಿನ ಮುದ್ದೆ ಇದ್ದಂತೆ , ಅವರನ್ನು ಸರಿಯಾದ ರೂಪ ನೀಡುವುದು ಹೆತ್ತವರ ಕರ್ತವ್ಯವಾದರೆ , ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಘ-ಸಂಸ್ಥೆ ಮಾಡಬೇಕು . ಆ ನಿಟ್ಟಿನಲ್ಲಿ ಮಹಿಳಾ ವೃಂದ ಮಹತ್ವದ ಪಾತ್ರವಹಿಸಿದೆ ಎಂದು ಹೇಳಿದರು.
ಸಂಧ್ಯಾ ಪಾಳಂದೆ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಮಾ ಆರ್ ರಾವ್ ಅವರು ಸ್ವಾಗತಿಸಿ, ಉದ್ಘಾಟಕರ ಪರಿಚಯವನ್ನು ಕಾರ್ಯದರ್ಶಿ ವೀಣಾ ವಿನೋದ್ ಅವರು ಮಾಡಿದರು . ಕಾರ್ಯಕ್ರಮದ ನಿರೂಪಣೆಯನ್ನು ರಶ್ಮಿ ಪಟವರ್ಧನ್ ರವರು ಮಾಡಿದರು . ಅಧ್ಯಕ್ಷೆ ಆಶಾ ಸತೀಶ್ ರವರು ಮಕ್ಕಳಿಗೆ ಶುಭಾಶಯ ಕೋರಿದರು.
ಸ್ಪರ್ಧೆಗಳ ತೀರ್ಪುಗಾರರಾಗಿ ಶ್ರೀಮತಿ ಮಂಗಳ ರತ್ನಾಕರ್ , ಅಧ್ಯಾಪಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡಗಕಾರಂದರು ಹಾಗೂ ಇನ್ನೊಬ್ಬರು ಶ್ರೀಮತಿ ಭಾರತಿ ದಿವಾಕರ್ , ಪ್ರಾಧ್ಯಾಪಕಿ ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿ ಆಗಮಿಸಿ ಮಕ್ಕಳಿಗೆ ಸ್ಪರ್ಧೆಯ ಫಲಿತಾಂಶವನ್ನು ನೀಡಿದರು.
ಮಹಿಳಾ ವೃಂದವು ಮಕ್ಕಳ ವೇದಿಕೆಯನ್ನು ಆಯೋಜಿಸಿದ್ದು , ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕುಮಾರಿ ನಿಶಾ ಅಧ್ಯಕ್ಷರಾಗಿ , ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುಮಾರಿ ಪೃಥ್ವಿ ಅತಿಥಿಯಾಗಿಯೂ , ಕುಮಾರಿ ದಿವ್ಯ ದ .ಕ . ಜಿ. ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇವರು ಮಕ್ಕಳ ವೇದಿಕೆಯ ಕಾರ್ಯಕ್ರಮ ನಿರೂಪಣೆ ಮಾಡಿದರು . ಶ್ರೀಮತಿ ವೀಣಾ ಆರ್ ಮಯ್ಯ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಮಹಿಳಾ ವೃಂದದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.