24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಮಕ್ಕಳ ದಿನಾಚರಣೆ

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಉದ್ಘಾಟಣೆಯನ್ನು ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್ ರವರು ನೆರವೇರಿಸಿ ಮಾತನಾಡಿ ಮಕ್ಕಳು ಮಣ್ಣಿನ ಮುದ್ದೆ ಇದ್ದಂತೆ , ಅವರನ್ನು ಸರಿಯಾದ ರೂಪ ನೀಡುವುದು ಹೆತ್ತವರ ಕರ್ತವ್ಯವಾದರೆ , ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಘ-ಸಂಸ್ಥೆ ಮಾಡಬೇಕು . ಆ ನಿಟ್ಟಿನಲ್ಲಿ ಮಹಿಳಾ ವೃಂದ ಮಹತ್ವದ ಪಾತ್ರವಹಿಸಿದೆ ಎಂದು ಹೇಳಿದರು.
ಸಂಧ್ಯಾ ಪಾಳಂದೆ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಮಾ ಆರ್ ರಾವ್ ಅವರು ಸ್ವಾಗತಿಸಿ, ಉದ್ಘಾಟಕರ ಪರಿಚಯವನ್ನು ಕಾರ್ಯದರ್ಶಿ ವೀಣಾ ವಿನೋದ್ ಅವರು ಮಾಡಿದರು . ಕಾರ್ಯಕ್ರಮದ ನಿರೂಪಣೆಯನ್ನು ರಶ್ಮಿ ಪಟವರ್ಧನ್ ರವರು ಮಾಡಿದರು . ಅಧ್ಯಕ್ಷೆ ಆಶಾ ಸತೀಶ್ ರವರು ಮಕ್ಕಳಿಗೆ ಶುಭಾಶಯ ಕೋರಿದರು.
ಸ್ಪರ್ಧೆಗಳ ತೀರ್ಪುಗಾರರಾಗಿ ಶ್ರೀಮತಿ ಮಂಗಳ ರತ್ನಾಕರ್ , ಅಧ್ಯಾಪಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡಗಕಾರಂದರು ಹಾಗೂ ಇನ್ನೊಬ್ಬರು ಶ್ರೀಮತಿ ಭಾರತಿ ದಿವಾಕರ್ , ಪ್ರಾಧ್ಯಾಪಕಿ ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿ ಆಗಮಿಸಿ ಮಕ್ಕಳಿಗೆ ಸ್ಪರ್ಧೆಯ ಫಲಿತಾಂಶವನ್ನು ನೀಡಿದರು.


ಮಹಿಳಾ ವೃಂದವು ಮಕ್ಕಳ ವೇದಿಕೆಯನ್ನು ಆಯೋಜಿಸಿದ್ದು , ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕುಮಾರಿ ನಿಶಾ ಅಧ್ಯಕ್ಷರಾಗಿ , ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುಮಾರಿ ಪೃಥ್ವಿ ಅತಿಥಿಯಾಗಿಯೂ , ಕುಮಾರಿ ದಿವ್ಯ ದ .ಕ . ಜಿ. ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇವರು ಮಕ್ಕಳ ವೇದಿಕೆಯ ಕಾರ್ಯಕ್ರಮ ನಿರೂಪಣೆ ಮಾಡಿದರು . ಶ್ರೀಮತಿ ವೀಣಾ ಆರ್ ಮಯ್ಯ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಮಹಿಳಾ ವೃಂದದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Related posts

ಕಿನ್ನಿಗೋಳಿಯ ಐತಿಹಾಸಿಕ ಜಯದ ರೂವಾರಿ ಮಡಂತ್ಯಾರಿನ ಜೋಯೇಲ್ ಮೆಂಡೋನ್ಸಾ

Suddi Udaya

ಬೆಳ್ತಂಗಡಿ: ಕೇಂದ್ರ ಸರಕಾರದ ವಿವಾದಿತ ವಕ್ಫ್ ಕಾಯಿದೆ ವಿರುದ್ಧ ತಾಲೂಕಿನಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ಮುಸ್ಲಿಮ್ ಮುಖಂಡರಿಂದ ನಿರ್ಧಾರ: ವಕ್ಫ್ ಸಂರಕ್ಷಣಾ ಹೋರಾಟ ಸಮಿತಿ ಅಸ್ಥಿತ್ವಕ್ಕೆ : ವೈ.ಸಿ.ಎಫ್. ನಿಂದ ಪೂರ್ವಭಾವಿ ಸಭೆ.

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ: ಕಾಯ್ದಿರಿಸಿದ ತೀರ್ಪು-ಏ.29ರವರೆಗೆ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

Suddi Udaya

ವೇಣೂರು ಪದ್ಮಾಂಬ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya

ಶ್ರೀ ಕಾಶಿ ಸಂಸ್ಥಾನ ಬೆಂಗಳೂರು ಶಾಖಾ ಮಠದ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿಯವರು ಬೆಳ್ತಂಗಡಿ ಶ್ರೀದೇವಿ ಹೋಟೇಲ್ ಗೆ ಭೇಟಿ

Suddi Udaya

ಅಳದಂಗಡಿ ಸೊಸೈಟಿಯಿಂದ ಸಂಘ ಸಂಸ್ಥೆಗಳಿಗೆ ದೇಣಿಗೆ ಹಸ್ತಾಂತರ

Suddi Udaya
error: Content is protected !!