26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಓಡಿಲ್ನಾಳ ಸ.ಉ.ಪ್ರಾ‌. ಶಾಲಾ ವಾರ್ಷಿಕೋತ್ಸವ ‘ಸಾಂಸ್ಕ್ರತಿಕ ಸಿಂಚನ’

ಕುವೆಟ್ಟು: ಸರಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದ ಮಕ್ಕಳು ಉನ್ನತ ಸ್ಥಾನವನ್ನು ಪಡೆಯುತ್ತಾರೆ ಎಂಬುವುದು ಇಲ್ಲಿಯ ಓಡಿಲ್ನಾಳ ಶಾಲೆಯ ಹಿರಿಯ ವಿಧ್ಯಾರ್ಥಿಗಳೇ ಸಾಕ್ಷಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ‌ ಕರ್ತವ್ಯ ನಮ್ಮದಾಗಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಡಿ 9 ರಂದು ಶಾಲಾ ಶಿಕ್ಷಣ ಇಲಾಖೆ ದ ಕ ಜಿ ಪಂ ಉ ಪ್ರಾ‌ ಶಾಲೆ ಓಡಿಲ್ನಾಳ ಇದರ ಶಾಲಾ‌ ವಾರ್ಷಿಕೋತ್ಸವ ಸಾಂಸ್ಕ್ರತಿಕ ಸಿಂಚನ ಕಾರ್ಯಕ್ರಮದ ಬೆಳಗ್ಗಿನ ಸಭಾ ಕಾರ್ಯಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತಾನಾಡಿದರು.
ಕುವೆಟ್ಟು ಗ್ರಾ ಪಂ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಧ್ವಜಾರೋಹಣ ಮಾಡಿ, ಕಾರ್ಯಕ್ರಮವನ್ನು‌ ದೀಪ ಬೆಳಗಿಸಿ ಚಾಲನೆ ನೀಡಿದರು. ಶಾಲಾ ಎಸ್ ಡಿ ಯಂ ಸಿ ಉಪಾಧ್ಯಕ್ಷೆ ಸಮೀಮ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಎಸ್ ಡಿ ಯಂ‌ ಸಿ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು. ಕುವೆಟ್ಟು ಗ್ರಾ ಪಂ ಸದಸ್ಯೆ ಆನಂದಿ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ‌ ಅರುಣ್ ಸುಮಿತ್ ಡಿಸೋಜ, ವರ್ಗಾವಣೆಗೊಂಡ ಶಿಕ್ಷಕಿ ದೀಪಾವತಿ, ಹಿರಿಯ ವಿದ್ಯಾರ್ಥಿ ಪದ್ಮಾವತಿ, ವಿದ್ಯಾರ್ಥಿ ನಾಯಕ ಪಾಝಿಲ್, ಶಾಲಾ ಮುಖ್ಯೋಪಾಧ್ಯಾಯನಿ ಉಷಾ ಪಿ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಶಾಲಾ ಅವರಣದ ಗೇಟು. ಅಂಗಣಕ್ಕೆ ಅಳವಡಿಸಿದ ಇಂಟರ್ ಲಾಕ್. ಗಾರ್ಡನ್ ಇದರ ಉದ್ಘಾಟನೆ ನಡೆಯಿತು. ದೈಹಿಕ ಶಿಕ್ಷಕ ನಿರಂಜನ್, ಸಹ ಶಿಕ್ಷಕಿ ಸುಜಾತ, ಶಿಕ್ಷಕಿ ಶಾರದ ಮಣಿ, ನಯನ ಟಿ, ಜಿ ಪಿ ಟಿ ಶಿಕ್ಷಕಿ ವೀಣಾ ಕೆ ಎಸ್, ವಿಲ್ಮೆಂಟ್ ಸೆರಾವೋ. ಜಿ ಪಿ ಟಿ ಶಿಕ್ಷಕಿ ಅಕ್ಷತಾ, ಗೌರವ ಶಿಕ್ಷಕಿ ಸುಮತಿ ಹಾಗೂ ಎಸ್ ಡಿ ಯಂ ಸಿ ಸದಸ್ಯರು. ಅಕ್ಷರ ದಾಸೋಹ ಸಿಬಂದಿಗಳು ಸಹಕರಿಸಿದರು.

Related posts

ವೇಣೂರು ಪದ್ಮಾಂಬ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya

ಜನತೆಯ ನಾಡಿ ಮಿಡಿತ ಅರಿತು ವಿಕಸಿತ ಭಾರತದ ಬಜೆಟ್ ಮಂಡನೆ: ಶಾಸಕ ಹರೀಶ್ ಪೂಂಜ

Suddi Udaya

ಬಂಟರ ಸಂಘದಿಂದ ವರ್ತಕ ಬಂಧು ಸಹಕಾರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿಯವರಿಗೆ ಸನ್ಮಾನ

Suddi Udaya

ಅಮೇರಿಕಾದಲ್ಲಿ ನೆಲೆಸಿದರೂ ಭಾರತೀಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿ ಗೃಹ ಪ್ರವೇಶ

Suddi Udaya

ಉಜಿರೆ: ಮಾಚಾರು ನಿವಾಸಿ ರಿಕ್ಷಾ ಚಾಲಕ ಸುಧಾಕರ ನಾಪತ್ತೆ

Suddi Udaya

ಬಳಂಜ: ಬೊಳ್ಳಾಜೆಯಿಂದ ಡೆಂಜೋಲಿ ತನಕ ಅಪಾಯಕಾರಿ ಮರಗಳ ತೆರವು ಕಾರ್ಯ

Suddi Udaya
error: Content is protected !!